ರಾಜೀನಾಮೆ ಬೆದರಿಕೆ ಒಡ್ಡಿದ ಧೋನಿ?

dhoni and rp singh
ಬೆಂಗಳೂರು,ನ.22:ಏಳು ಏಕದಿನ ಪಂದ್ಯಗಳ ಸರಣಿಯನ್ನು 3-0 ಸೊನ್ನೆ ಅಂತರದಿಂದ ಗೆದ್ದು ಬೀಗುತ್ತಿರುವ ಭಾರತ ತಂಡ, ನಾಲ್ಕನೆ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಧೋನಿ ರಾಜೀನಾಮೆ ನೀಡಲು ಮುಂದಾದ ಪ್ರಸಂಗ ನಡೆದಿದೆ. ಸರಣಿಯ ಮುಂದಿನ ನಾಲ್ಕು ಪಂದ್ಯಗಳಿಗೆ ಆರ್ ಪಿ ಸಿಂಗ್ ಅವರನ್ನು ಕೈಬಿಟ್ಟ ಬಿಸಿಸಿಐ ಆಯ್ಕೆ ಮಂಡಳಿ ವಿರುದ್ಧ ಧೋನಿ ಕಿಡಿ ಕಾರಿ, ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದರು ಎನ್ನಲಾಗಿದೆ.

"ಆರ್ ಪಿಸಿಂಗ್ ಫಾರ್ಮ್ ಕಳೆದುಕೊಂಡಿದ್ದಾರೆ . ರಣಜಿ ಪಂದ್ಯಗಳನ್ನು ಆಡಿ ಉತ್ತಮ ಲಯ ಕಂಡುಕೊಳ್ಳಲಿ ಎಂಬುದು ಆಯ್ಕೆದಾರರ ಒಮ್ಮತದ ನಿರ್ಧಾರವಾಗಿದೆ ಹಾಗಾಗಿ ಅವರನ್ನು ಕೈ ಬಿಡಲಾಗಿದೆ "ಎಂದು ಆಯ್ಕೆ ಮಂಡಳಿ ಅಧ್ಯಕ್ಷ ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ. ಆರ್ ಪಿ ಸಿಂಗ್ ಬದಲು ಇರ್ಫಾನ್ ಪಠಾಣ್ ಅವರನ್ನು ಆಯ್ಕೆ ಮಾಡಿರುವ ಆಯ್ಕೆ ಮಂಡಳಿ ವಿರುದ್ಧ ಧೋನಿ ಕೋಪಗೊಂಡಿರುವುದು ಬಹಿರಂಗವಾಗಿದೆ.ಆಯ್ಕೆ ಮಂಡಳಿಯ ಕ್ರಮ ಖಂಡಿಸಿ ಧೋನಿ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ವಿಷಯ ಗಂಭೀರವಾದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎನ್ನಲಾಗಿದೆ. ಆದರೆ ಈ ವಿಷಯವನ್ನು ಅಲ್ಲಗೆಳೆದಿರುವ ಬಿಸಿಸಿಐ ವಕ್ತಾರರು ಇದು ಗಾಳಿಸುದ್ದಿಯಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ತಾಲೀಮು ನಡೆಸಿರುವ ಧೋನಿ ಪಡೆಗೆ ಮಳೆ ಭೀತಿ ಕೂಡ ಕಾಡುತ್ತಿದೆ. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಕಂಡು ಧೋನಿ ಕೂಡ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ಬಿಸಿಸಿಐನ ಆಯ್ಕೆ ಮಂಡಳಿಯೇ ಉತ್ತರಿಸಬೇಕು. ಗೌಪ್ಯವಾಗಿರಬೇಕಾದ ವಿಷಯಗಳನ್ನು ಮಾಧ್ಯಮಕ್ಕೆ ತಲುಪುವಂತೆ ಮಾಡಿದ ವ್ಯಕ್ತಿ ಯಾರೆಂದು ತಿಳಿದು ಮೊದಲು ಅವರನ್ನು ಪ್ರಶ್ನಿಸಿ ಎಂದು ಧೋನಿ ಹೇಳಿದರು
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+