ಅಕ್ರಮ ಅನಿಲ ಭರ್ತಿ: ಆರೋಪಿ ಬಂಧನ
ಮಡಿಕೇರಿ, ನ. 18: ನಗರದಲ್ಲಿ ವಾಹನಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬಿಸುವ ದಂಧೆ ಹೆನಡೆಸುತ್ತಿದ್ದ ವಾಣಿಜ್ಯ ಮಳಿಗೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಕೃತ್ಯಕ್ಕೆ ಬಳಸುತ್ತಿದ್ದ ಸಾಧನ ಹಾಗೂ ವ್ಯಕ್ತಿಯೋರ್ವನನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ.
ನಗರದ ರಾಣಿಪೇಟೆ ಎಂ.ಎಸ್.ಎಲೆಕ್ಟ್ರಿಕಲ್ಸ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳಿಂದ ವಾಹನಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬಿಸುವ ವ್ಯವಹಾರ ನಡೆಯುತ್ತಿರುವ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಬಲದೇವಕೃಷ್ಣ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಅವರ ಸೂಚನೆಯ ಮೇರೆಗೆ ಡಿ.ವೈ.ಎಸ್.ಪಿ. ಪ್ರಕಾಶ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.
ವಿ.ಟಿ. ಸಾಬು ಎಂಬುವವರು ಬಂಧಿತ ಆರೋಪಿಯಾಗಿದ್ದು, ತಮ್ಮ ಎಂ.ಎಸ್.ಆಟೋ ಎಲೆಕ್ಟ್ರಿಕಲ್ಸ್ ಪಕ್ಕದ ಖಾಲಿ ಕೊಠಡಿಯಲ್ಲಿ ಯಂತ್ರವನ್ನು ಬಳಸಿ ಅಡುಗೆ ಸಿಲಿಂಡರ್‌ಗಳಿಂದ ವಾಹನಗಳ ಗ್ಯಾಸ್ ಕಿಟ್‌ಗಳಿಗೆ ಅನಿಲ ಭರ್ತಿ ಮಾಡಿಕೊಡುವ ಕಾರ್ಯ ನಡೆಸುತ್ತಿದ್ದರು. ಗ್ಯಾಸ್ ಮತ್ತು ಪೆಟ್ರೋಲಿಯಂ ಕಾಯ್ದೆ ಪ್ರಕಾರ ಯಂತ್ರೋಪಕರಣವನ್ನು ವಶಕ್ಕೆ ತೆಗೆದುಕೊಂಡು ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿ.ವೈ.ಎಸ್.ಪಿ. ಪ್ರಕಾಶ್ ಮಾಹಿತಿ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications