ಕರ್ನಾಟಕದಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
ಬೆಂಗಳೂರು, ನ. 17: ನಗರದಲ್ಲಿ ಭಾನುವಾರ ಬೆಳಿಗ್ಗಿನಿಂದಲೇ ಶುರುವಾದ ತುಂತುರು ಮಳೆ, ತುಮಕೂರು, ಅತ್ತಿಬೆಲೆ ಸುತ್ತಮುತ್ತಲಿಗೂ ವ್ಯಾಪಿಸಿತ್ತು. ಹವಾಮಾನ ಇಲಾಖೆ ವರದಿಯಂತೆ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಮುಂದೆವರೆಯಲಿದೆ.
ರಾಯಲ ಸೀಮೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಚಂಡಮಾರುತ ದುರ್ಬಲಗೊಂಡಿರುವುದರಿಂದ, ಕರ್ನಾಟಕದ ಒಳನಾಡು ಸೇರಿದಂತೆ ಹಲವಡೆ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 24ಗಂಟೆಗಳ ಒಳಗಾಗಿ ಕರ್ನಾಟಕದ ಒಳನಾಡು, ರಾಯಲ್ ಸೀಮೆ, ದಕ್ಷಿಣ ತೆಲಾಂಗಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications