ಬಹರೇನ್ ಉದ್ಯಮಿಗಳ ಜೊತೆ ಸಿಎಂ ಸಭೆ

ಬಹರೇನ್ , ನ. 15 : ಬಹರೇನ್ ನ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಸಂಜೆ ಬಹರೇನ್ ಉದ್ಯಮಿಗಳೊಂದಿಗೆ ಸಭೆ ನಡೆಸಿದರು. ಬಹರೇನಿನ ಉದ್ಯಮ ಕ್ಷೇತ್ರದ ಸುಮಾರು ನೂರಕ್ಕೂ ಅಧಿಕ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಉದ್ಯಮಿಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಖ್ಯಮಂತ್ರಿಗಳು ಆಹ್ವಾನಿಸಿದರು.

ಬಂಡವಾಳ ಹೂಡಲು ಅಗತ್ಯವಾದ ಎಲ್ಲ ಪೂರಕ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, ಭಾಗವಹಿಸಿದ್ದ ಕೆಲ ಉದ್ಯಮ ಪ್ರತಿನಿಧಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಚರ್ಚೆ ನಡೆಸಲು ಅನಿವಾಸಿ ಭಾರತೀಯರು ಹಾಗೂ ಬೆಹರೀನ್ ಉದ್ಯಮಿಗಳ ತಂಡವೊಂದು ಆದಷ್ಟು ಶೀಘ್ರವಾಗಿ ಕರ್ನಾಟಕಕ್ಕೆ ಬರುವುದಾಗಿ ತಿಳಿಸಿದ್ದಾರೆ. ಬ್ರಾಂಕೋ ಸಮೂಹದ ಅಧ್ಯಕ್ಷರಾದ ಅನಿಲ್ ದಿವಾನ್ ಅವರ ಮುಖಂಡತ್ವದಲ್ಲಿ ಉದ್ಯಮಿಗಳ ನಿಯೋಗವೊಂದು ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡಲಿದೆ.

ವಿಶೇಷವಾಗಿ ಗಣಿಗಾರಿಕೆ, ಅಲ್ಯುಮಿನಿಯಂ ಬಾಕ್ಸೈಟ್ ಉದ್ಯಮದಲ್ಲಿ ಬಹರೇನ್ ಉದ್ಯಮಿಗಳು ಬಂಡವಾಳ ಹೂಡಲು ಆಸಕ್ತಿ ವಹಿಸಿದ್ದಾರೆ. ಉದ್ಯಮಿಗಳ ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿಗಳು ಹಾಗೂ ನಿಯೋಗದ ಇತರ ಸದಸ್ಯರನ್ನು ಬೆಹರೇನ್ ಕನ್ನಡ ಸಂಘದ ಸದಸ್ಯರು ಭೇಟಿ ಮಾಡಿ ಸಂಜೆ ಆಯೋಜಿಸಿರುವ "ಕನ್ನಡ ವೈಭವ 2008' ಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿದರು. ಸಂಜೆ ಮುಖ್ಯಮಂತ್ರಿಗಳ ನಿಯೋಗವು ಈ ಕನ್ನಡ ವೈಭವ 2008 ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+