ಶಂಕಿತ ಉಗ್ರರಿಗೆ 10 ಲಕ್ಷ ಗಿಫ್ಟ್:ಅಮರ್ ಸಿಂಗ್
ನವದೆಹಲಿ, ನ. 15 : ಸೆಪ್ಟೆಂಬರ್ ತಿಂಗಳಲ್ಲಿ ನವದೆಹಲಿಯ ಸರಣಿ ಸ್ಪೋಟದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತರಾಗಿರುವ ಜಾಮಿಯ ಮಿಲಿಯ ಇಸ್ಲಾಮೀಯ ವಿದ್ಯಾರ್ಥಿಗಳಿಗೆ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ 10 ಲಕ್ಷ ರೂಪಾಯಿಗಳ ನೆರವು ಘೋಷಿಸಿದೆ.
ಜಾಮಿಯ ನಗರ ಗುಂಡಿನ ಕಾಳಗ ಸಂಬಂಧ ಜಾಮಿಯ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಈ ವಿಷಯವನ್ನು ಪ್ರಕಟಿಸಿದರು. ಶಕೀಲ್, ಜಿಯಾ ಉರ್ ರೆಹಮಾನ್ ಎಂಬಿಬ್ಬರ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿರುವ 10 ಆರೋಪಿಗಳಲ್ಲಿ ಈ ಇಬ್ಬರು ಸೇರಿದ್ದಾರೆ ಪೊಲೀಸ್ ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಎಲ್ಲ ವಿದ್ಯಾರ್ಥಿಗಳು ಸ್ಪೋಟದ ಹೊಣೆಹೊತ್ತಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕಾರ್ಯಕರ್ತರು ಎನ್ನುವ ಆರೋಪವಿದೆ.
ಸ್ಪೋಟದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಜಾಮಿಯ ವಿಧ್ಯಾರ್ಥಿಗಳಿಗೆ ಬೆಂಬಲ ನೀಡಲು ಪಕ್ಷ ನಿರ್ಧರಿಸಿದೆ ಎಂದು ಅಮರ್ ಸಿಂಗ್ ಹೇಳಿದರು. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಆ ಪಕ್ಷದ ಜಾತ್ಯತೀತ ನಿಲುವು ಕುರಿತು ಅನುಮಾನ ಮೂಡಿಸಿದೆ ಎ೦ದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications