ಆಕಾಶವಾಣಿಗೆ ಅರೆಕಾಲಿಕ ವರದಿಗಾರರು ಬೇಕು

ಮೈಸೂರು, ನ. 15 : ಆಕಾಶವಾಣಿಯ ಸುದ್ದಿ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ರಾಜ್ಯದ ಒಂಭತ್ತು ಜಿಲ್ಲೆಗಳಿಂದ ಅರೆಕಾಲಿಕ ವರದಿಗಾರರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದ ಅರೆಕಾಲಿಕ ವರದಿಗಾರರ ಹುದ್ದೆ ಇದಾಗಿದ್ದು , ಪ್ರಸಕ್ತ ಮೈಸೂರು, ತುಮಕೂರು, ಬಿಜಾಪುರ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗತ್ತಿದೆ. ಪದವಿ ಜೊತೆಗೆ 2 ರಿಂದ 3 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದು ಸಂಬಂಧಿಸಿದ ಜಿಲ್ಲಾ ಕೇಂದ್ರದ ನಿವಾಸಿಯಾಗಿರಬೇಕು.

ಕ್ಯಾಮರಾ ಚಾಲನೆ ಮಾಡುವ, ದೂರದರ್ಶನಕ್ಕೆ ವರದಿ ಮಾಡುವ, ದೃಶ್ಯ ಮಾಧ್ಯಮದ ಅನುಭವ ಹೊಂದಿರಬೇಕು. ಬೆರಳಚ್ಚು ಹಾಗೂ ಕಂಪ್ಯೂಟರ್ ಪರಿಜ್ಞಾನ ಅಗತ್ಯವಿದ್ದು, ಕನ್ನಡ ಹಾಗೂ ಇಂಗ್ಲೀಷ್‌ಗಳಲ್ಲಿ ಓದಲು, ಬರೆಯಲು ಹಾಗೂ ಭಾಷಾಂತರಿಸುವ ಪರಿಜ್ಞಾನದ ಅಗತ್ಯತೆ ಇದೆ.

25 ರಿಂದ 50 ವರ್ಷ ವಯೋಮಿತಿಯಲ್ಲಿದ್ದು, ಅರ್ಹತೆ ಆಧಾರದ ಮೇಲೆ 55 ವರ್ಷದವರೆಗೆ ಸಡಿಲಿಕೆ ಉಂಟು. ಆಯ್ಕೆ ನಂತರದ ಮೊದಲ ಮೂರು ತಿಂಗಳು ಅಂತರ ಕಾರ್ಯಕ್ಷಮತೆ ಪರಿಶೀಲಿಸಲಾಗುವುದು. ನಂತರ ಪ್ರತೀ ವರ್ಷ ನವೀಕರಿಸುವ ಆಧಾರದ ಮೇಲೆ ಗರಿಷ್ಠ ಅವರ ಆರೋಗ್ಯದ ದೃಢತೆ ಆಧರಿಸಿ ಮುಂದುವರೆಸಲಾಗುವುದು. ಮಾಸಿಕ ರೂ.1500 ಸಂಭಾವನೆ ನೀಡಲಾಗುವುದು.

ನಿಗದಿತ ನಮೂನೆ ಅರ್ಜಿ ಹಾಗೂ ಹೆಚ್ಚಿನ ವಿವರಗಳನ್ನು ಬೆಂಗಳೂರು ಆಕಾಶವಾಣಿ ನಿಲಯದಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ಡಿ. 12 ಕೊನೆಯ ದಿನವಾಗಿದೆ. ತುಂಬಿದ ಅರ್ಜಿಗಳನ್ನು ನಿಲಯ ನಿರ್ದೇಶಕರು, ಆಕಾಶವಾಣಿ, ರಾಜಭವನ ರಸ್ತೆ, ಬೆಂಗಳೂರು - 560204 ಇವರಿಗೆ ತಲುಪಿಸಲು ಕೋರಿದೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+