ಆರ್ಎಸ್ಎಸ್ ಸಿಮಿ ಸಂಘಟನೆಯ ಪ್ರತಿರೂಪ

ಬೆಂಗಳೂರು, ನ. 15 : ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆ ಪ್ರತಿರೂಪದಂತಿವೆ. ಈ ಎರಡು ಸಂಘಟನೆಗಳು ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಕೂಡಲೇ ಇವುಗಳನ್ನು ನಿಷೇಧಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಅರ್ ಎಸ್ ಎಸ್) ನಿಷೇಧಿಸಬೇಕು. ರಾಷ್ಟ್ರದಲ್ಲಿ ಶಂಕರಾಚಾರ್ಯರ ಐದು ಪೀಠಗಳು ಮಾತ್ರ ಮಾನ್ಯತೆ ಪಡೆದಿವೆ. ಆದರೆ ವಿಎಚ್ ಪಿ ಅನೇಕ ಶಂಕರಾಚಾರ್ಯರನ್ನು ಸೃಷ್ಟಿಸಿದೆ. ಮಾಲೇಗಾಂವ್ ಸ್ಪೋಟದಲ್ಲಿ ಹಿಂದೂ ಭಯೋತ್ಪಾದಕರ ಪಾತ್ರವನ್ನು ಬಹಿರಂಗಗೊಳಿಸಿದ ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳವನ್ನು ನಾನು ಅಭಿನಂದಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+