ಹೂಡ್ಲಿಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ?
ಬೆಂಗಳೂರು ನ. 15: ರಾಜ್ಯಕ್ಕೆ ವಿದ್ಯುತ್ ಕೊರತೆಯನ್ನು ತುಂಬಲು ಜಿ.ಎಂ.ಆರ್ ಸಂಸ್ಥೆಯಿಂದ 200 ಬಾರ್ಟರ್‌ನಿಂದ 200 ಜಿಂದಾಲ್‌ನಿಂದ 50 ಒಟ್ಟು 450 ಮೆ.ವಾ. ವಿದ್ಯುತ್‌ನ್ನು ಖರೀದಿಸಲಾಗುತ್ತಿದ್ದು ನಾಳೆಯಿಂದ ಗ್ರೀಡ್‌ಗೆ ಬರಲಿದೆ. ಡಿಸೆಂಬರ್ 31 ರವರೆಗೆ ಈಗಾಗಲೆ ತಿಳಿಸಿರುವಂತೆ ಸರಬರಾಜು ಶೆಡ್ಯೂಲ್‌ನ್ನು ಅನುಸರಿಸಲಾಗುತ್ತಿದೆ.
ನವೆಂಬರ್ 18 ರಂದು ಕೇಂದ್ರ ಸಚಿವ ಚಿದಂಬರಂ ಹಾಗೂ ಜೈರಾಮ್ ರಮೇಶ್ ಅವರು ಆಹ್ವಾನ ನೀಡಿದ್ದು ಬಿಜಾಪುರದ ಹೂಡ್ಲಿಗಿಯಲ್ಲಿ 4000 ಮೆ.ವಾ. ಸಾಮರ್ಥ್ಯದ ಉಷ್ಣವಿದ್ಯುತ್‌ಸ್ಥಾವರ ಸ್ಥಾಪನೆ ಕುರಿತಂತೆ ಚರ್ಚಿಸಲಾಗುತ್ತದೆ. ಜಯರಾಂ ರಮೇಶ್ ಅವರು ಈ ಬಗ್ಗೆ ಬೆಂಬಲ ವ್ಯಕ್ತಪಡಿಸಿ ಈಗಾಗಲೇ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಿಗೆ ತಿಳಿಸಿದ್ದಾರೆ.
ನವೆಂಬರ್ 19 ರಂದು ಕೇಂದ್ರ ಅರ್ಥ ಸಚಿವರು ಸಭೆ ಕರೆದಿದ್ದಾರೆಂದು ಈಶ್ವರಪ್ಪ ಅವರು ಪತ್ರಕರ್ತರಿಗೆ ತಿಳಿಸಿದರು. ದೆಹಲಿ ಭೇಟಿ ನೀಡಿದ ಸಂದರ್ಭದಲ್ಲಿ ಎನ್.ಟಿ.ಪಿ.ಸಿ. ಜೊತೆಯೂ ಸಹ ಎಂ.ಒ.ಯು. ಮಾಡುವ ಸಂಬಂಧವಾಗಿ ಮಾತುಕತೆ ನಡೆಸಲಾಗುವುದೆಂದರು. ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲೂ ಎನ್.ಟಿ.ಪಿ.ಸಿ. ಸ್ಥಾವರಗಳಿವೆ ಎಂಬ ಅಂಶವನ್ನೂ ಸಹ ಸಚಿವರು ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications