ಅಕ್ಕಿಗಿರಣಿ ಮಾಲೀಕರ ಮುಷ್ಕರ ಅಂತ್ಯ
ಬೆಂಗಳೂರು, ನ. 14 : ಲೆವಿ ಅಕ್ಕಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮೂರು ದಿನಗಳಿಂದ ನಡೆದಿದ್ದ ಅಕ್ಕಿಗಿರಣಿ ಮಾಲೀಕರ ಮುಷ್ಕರ ಅಂತ್ಯಗೊಂಡಿದೆ. ಲೆವಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅಕ್ಕಿ ಗಿರಣಿ ಮಾಲೀಕರ ನಡುವೆ ಇಂದು ನಡೆದ ಮಾತುಕತೆಯು ಸೌಹಾರ್ದಯುತವಾಗಿ ಬಗೆಹರಿದಿದ್ದು, ಅಕ್ಕಿಗಿರಣಿ ಮಾಲೀಕರು ನಡೆಸುತ್ತಿದ್ದ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಹೆಚ್. ಹಾಲಪ್ಪ ತಿಳಿಸಿದರು.
ಭತ್ತಕ್ಕೆ ಕ್ವಿಂಟಾಲ್ ರು.900 ಹಾಗೂ ರು.930 ರು.ಗಳ ಬೆಂಬಲ ಬೆಲೆಯನ್ನು ಸರ್ಕಾರ ನಿಗಧಿಪಡಿಸಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು. ಅಕ್ಕಿಗಿರಣಿ ಮಾಲೀಕರು ಇಂದಿನಿಂದಲೇ ಎಂದಿನಂತೆ ತಮ್ಮ ದೈನಂದಿನ ವ್ಯವಹಾರ ನಡೆಸಲು ತೀರ್ಮಾನಿಸಿದ್ದೇವೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಪರಣ್ಣ ಮನವಳ್ಳಿ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications