ಮಾಲೆಗಾಂವ್ ಸ್ಫೋಟ : ಪುರೋಹಿತ್ ತಪ್ಪೊಪ್ಪಿಗೆ
ನವದೆಹಲಿ. ನ. 14 : ಮಾಲೆಗಾಂವ್ ಸ್ಫೋಟ ಸಂಚು ರೂಪಿಸಿದ್ದ ನಾನೇ ಎಂದು ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರು ಇಂದು ನಡೆಸಿದ ಮಂಪರು ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಸೇಡಿ ತೀರಿಸಿಕೊಳ್ಳಲು ಈ ಸಂಚು ರೂಪಿಸಲಾಗಿದೆ ಎಂದು ಪುರೋಹಿತ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹದ ಪೊಲೀಸರು ಬಂಧಿಸಿರುವ ಸ್ವಯಂ ಘೋಷಿಕ ಸ್ವಾಮೀಜಿ ದಯಾನಂದ ಪಾಂಡೆ ಅಜ್ಮೀರ ಮತ್ತು ನಾಂದೆಡ್ ಸ್ಫೋಟದ ರೂವಾರಿಗಳು ಎಂದು ಪುರೋಹಿತ್ ಪರೀಕ್ಷೆ ವೇಳೆ ತಿಳಿಸಿದ್ದಾರೆ. ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ದಯಾನಂದ ಪಾಂಡೆ ಪರಿಚಯಿಸಿದ್ದರು. ಮುಂದಿನ ದಿನಗಳಲ್ಲಿ ಸ್ಫೋಟ ಕೃತ್ಯಕ್ಕೆ ಬಳಸಿಕೊಳ್ಳಲು ಸುಮಾರು 500 ಕ್ಕೊ ಹೆಚ್ಚು ಜನರಿಗೆ ತರಬೇತಿ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತರಬೇತಿದಾರರಿಗೆ ಗುಜರಾತನ ಅಸೀಮಾನಂದ ಅಶ್ರಮದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು ಎಂದು ಪರೀಕ್ಷೆಯಲ್ಲಿ ಬಹಿರಂಗಪಡಿಸಿದ್ದಾರೆ. ದಯಾನಂದ ಪಾಂಡೆ ಅವರನ್ನು ನ. 26ರ ವರೆಗೆ ಪೊಲೀಸ್ ವಶದಲ್ಲಿರಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications