ಮಾಲೇಗಾಂವ್ ಸ್ಫೋಟ : ತೀವ್ರ ತನಿಖೆ
ಲಕ್ನೋ, ನ. 11 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಸಿಕ್ ನ್ಯಾಯಾಲಯ ಅನುಮತಿ ಪಡೆದಿರುವ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಪೊಲೀಸ್ ತಂಡ ಉತ್ತರ ಪ್ರದೇಶಕ್ಕೆ ತೆರಳಿದೆ. ಸ್ಫೋಟಕ್ಕೆ ಹಣ ಒದಗಿಸಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಹಿಂದು ಸಂಘಟನೆಯ ಸದಸ್ಯರೊಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದೆ.
ಹಿಂದು ಸಂಘಟನೆಯ ಸದಸ್ಯ ಅಭಿನವ್ ಭರತ್ ಬಂಧಿತ ವ್ಯಕ್ತಿ ಎನ್ನಲಾಗಿದೆ. ಇವರ ಬ್ಯಾಂಕ್ ಅಕೌಂಟ್ ಮೂಲಕ ಮಾಲೇಗಾಂವ್ ಸ್ಫೋಟದಲ್ಲಿ ಕೈವಾಡವಿದೆ ಎನ್ನಲಾದ ಅಜಯ್ ರಾಹಿರಿಕರ್ ಗೆ 1.85 ಲಕ್ಷ ರು.ಗಳು ಸಮೀರ್ ಕುಲಕರ್ಣಿಗೆ 1.15 ಲಕ್ಷ ರು.ಗಳು, ರಮೇಶ್ ಉಪಾಧ್ಯಯಗೆ 95 ಸಾವಿರ ರು.ಗಳು, ರಾಕೇಶ ಧಾವಡೆ ಅವರಿಗೆ 3.20 ಲಕ್ಷ ರು.ಗಳನ್ನು ನೀಡಿರುವ ಸ್ಪಷ್ಟವಾದ ಮಾಹಿತಿ ದೊರೆಕಿದೆ ಎಂದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಅಜಯ್ ಮಿಸಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಉತ್ತರ ಪ್ರದೇಶಕ್ಕೆ ತೆರಳಿ ಆತನನ್ನು ಬಂಧಿಸ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟಪುಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
