ನಂದಿನಿ ಹಾಲಿನ ಜಗಳ ಕೋರ್ಟ್ ಹಾಲ್ ತನಕ
ಬೆಂಗಳೂರು, ನ. 11 : ಕೆಎಂಎಫ್ ಮತ್ತು ಸರ್ಕಾರದ ನಡುವಿನ ಜಗಳ ಈಗ ಹೈಕೋರ್ಟ್ ಮೆಟ್ಟಲೇರಿದೆ. ಕೆಎಂಎಫ್ ವ್ಯವಹಾರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡತೊಡಗಿದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಲು ಕೆಎಂಎಫ್ ನಿರ್ದೇಶಕ ಮಂಡಳಿ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ಕೆಎಂಎಫ್ ವ್ಯವಹಾರಗಳಲ್ಲಿನ ಸರಕಾರದ ಹಸ್ತಕ್ಷೇಪ ಮತ್ತು ಸಂಸ್ಥೆಯ ಲೆಕ್ಕ ಪರಿಶೋಧನೆ ನಡೆಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಸೋಮವಾರ ಕೆಎಂಎಫ್ ನಿರ್ದೇಶಕರೊಬ್ಬರು ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದರೆ, ಇಂದು ಸಂಸ್ಥೆಯ ಇನ್ನೊಬ್ಬ ನಿರ್ದೇಶಕರು ಸರಕಾರದ ವಿರುದ್ದ ಹೈಕೋರ್ಟ್ ನಲ್ಲಿ ಇನ್ನೊಂದು ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಹಾಲಿನ ದರ ಏರಿಕೆ ಕುರಿತು ಕೆಎಂಎಫ್ ಹಾಗೂ ಸರ್ಕಾರ ನಡುವಿನ ವಿರಸ ಹೆಚ್ಚಾಗಿದ್ದು, ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಸರ್ಕಾರ ಹಸ್ತಕ್ಷೇಪದಿಂದ ಬೇಸತ್ತು ಬೇರೆ ದಾರಿ ಇಲ್ಲದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
