ತೈಲ ದರ ಇಳಿಕೆ ಸದ್ಯಕ್ಕಿಲ್ಲ: ಮನಮೋಹನ್ ಸಿಂಗ್
ನವದೆಹಲಿ, ನ. 11 : ಪೆಟ್ರೋಲ್ , ಡಿಸೇಲ್ ದರಗಳನ್ನು ಕಡಿತಗೊಳಿಸುವ ಯಾವ ಚಿಂತನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು.
ಗಲ್ಫ ದೇಶದಿಂದ ಸ್ವದೇಶಕ್ಕೆ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚ್ಚಾ ತೈಲ ಬೆಲೆ ಇಳಿಕೆಯ ಪ್ರಮಾಣವನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯ ಪ್ರಮಾಣದಲ್ಲಿ ಬ್ಯಾಲರ್ ಒಂದಕ್ಕೆ 65 ಡಾಲರ್ ಆಗಿದೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಲಿದೆ ಎನ್ನುವ ಸಾರ್ವಜನಿಕರ ಅಶಯಕ್ಕೆ ಪ್ರಧಾನಮಂತ್ರಿಯವರು ತಣ್ಣೀರೆರೆಚಿದರು.
ಕಚ್ಚಾ ತೈಲ ಬೆಲೆ ಗಗನಕ್ಕೇರಿದಾಗಿ ತೈಲ ಕಂಪನಿಗಳು ತಂಬಾ ನಷ್ಟ ಅನುಭವಿಸಿವೆ. ಇದೀಗ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರಿಂದ ನಷ್ಟವಾಗಿರುವುದನ್ನು ತುಂಬಿಕೊಳ್ಳಲಾಗುತ್ತಿದೆ. ಮುಂದಿನ ಮಾರುಕಟ್ಟೆ ವಹಿವಾಟು ಆಧರಿಸಿ ತೈಲ ಬೆಲೆಗಳ ಕಡೆ ಗಮನ ಹರಿಸಲಾಗುವುದು ಎಂದು ಮನಮೋಹನ್ ಸಿಂಗ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
