ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಐಟಿ.ಬಿಜ್: ಇನ್ಫಿ, ವಿಪ್ರೋ ಗೆ ಪ್ರಶಸ್ತಿ

By ನಿಸ್ಮ್ತಿತಾ
|
Google Oneindia Kannada News

STPI and Ktaka IT Exports awards
ಬೆಂಗಳೂರು, ನ.10:ವಾರ್ಷಿಕ ಎಸ್‌ಟಿಪಿಐ ಹಾಗೂ ಕರ್ನಾಟಕ ರಾಜ್ಯ ಐಟಿ ರಫ್ತು ಪ್ರಶಸ್ತಿ 2007-08 ಪ್ರಶಸ್ತಿಗಳನ್ನು ಬೆಂಗಳೂರು ಐಟಿ.ಬಿಜ್‌ನಲ್ಲಿ ಪ್ರದಾನಿಸಲಾಯಿತು. ಮೊದಲ ಬಾರಿಗೆ, ಎಸ್‌ಟಿಪಿಐ ರಫ್ತು ಪ್ರಶಸ್ತಿಗಳನ್ನು ಬೆಂಗಳೂರು ಐಟಿ.ಬಿಜ್ ನೊಂದಿಗೆ ಸಂಯುಕ್ತಗೊಳಿಸಲಾಗಿದೆ. ಈ ವರ್ಷವೂ, ಐಸಿಟಿ ಉದ್ದಿಮೆಯಲ್ಲಿ ಉತ್ಕೃಷ್ಟ ಕಾರ್ಯದಕ್ಷತೆ ಹಾಗೂ ಕೊಡುಗೆಗೆ ವಿವಿಧ ವರ್ಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

ಟೈಯರ್-2 ನಗರಗಳನ್ನು ಒಳಗೊಂಡ ಪ್ರಶಸ್ತಿಗಳನ್ನು ಸೇರಿಸಲಾಗಿದೆ. ಐಟಿ ಮತ್ತು ಬಿಟಿ, ಮಾಹಿತಿ, ಅಬಕಾರಿ ಮತ್ತು ಬೆಂ.ನೀ.ಸ.ಒ.ಚಂ. ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅಶೋಕ್ ಕುಮಾರ್ ಮನೋಲಿ, ಐ.ಎ.ಎಸ್. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಐಟಿ, ಬಿಟಿ, ಮಾಹಿತಿ, ಇಲಾಖೆ ಮತ್ತು ಆರ್. ರಾಜಲಕ್ಷ್ಮಿ, ನಿರ್ದೇಶಕರು, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ಇವರುಗಳು, ನ್ಯಾಸ್ಕಾಂ ಸೇರಿದಂತೆ ಬೃಹತ್ ಉದ್ದಿಮೆಯ ಅಭೆಯಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಿದರು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ತಮ್ಮ ಭಾಷಣದಲ್ಲಿ ಐ ಟಿ ಉದ್ದಿಮೆಯನ್ನು ಶ್ಲಾಘಿಸುತ್ತ, "ರಾಜ್ಯ ಸರ್ಕಾರವು ಎಸ್ ಟಿ ಪಿ ಐ ಸಹಯೋಗದಲ್ಲಿ ಕರ್ನಾಟಕದ ಅತ್ಯುತ್ತಮ ಐ ಟಿ ರಫ್ತು ಕಂಪನಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಂಪರೆಯನ್ನು ಅನುಸರಿಸಿದೆ. ಇದು, ಕರ್ನಾಟಕವು ಐ ಟಿ ಕ್ಷೇತ್ರದಲ್ಲಿ ಜಗತ್ತನ್ನು ಮುನ್ನಡೆಸುತ್ತಿದೆ ಎಂಬುದನ್ನು ಸೂಚಿಸುತ್ತದೆ. 2007-08 ರ ಆರ್ಥಿಕ ವರ್ಷದಲ್ಲಿ ಭಾರತ 40 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಐ ಟಿ ರಫ್ತು ಕೈಗೊಂಡಿತ್ತು.

ಇದರಲ್ಲಿ ಕರ್ನಾಟಕದ ಕೊಡುಗೆಯೇ 14.2 ಬಿಲಿಯನ್ ಅಮೆರಿಕನ್ ಡಾಲರ್‌ಗಳಾಗಿದೆ. ಕರ್ನಾಟಕದ ಉನ್ನತ ಐ ಟಿ ಕಮ್ಪನಿಗಳು ಕರ್ನಾಟಕಕ್ಕೆ ಗೌರವ ತಂದುಕೊಟ್ಟಿವೆ.ಕರ್ನಾಟಕಕ್ಕೆ ಕೀರ್ತಿ ತಂದ ನೆನಪಿಗಾಗಿ, ಶ್ರೇಷ್ಠ ಐ ಟಿ ಕಂಪನಿಗಳಿಗೆ ಈ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ" ಎಂದರು.ಮೂಲಭೂತ ಸೌಕರ್ಯದ ಪ್ರಾಮುಖ್ಯತೆ ಬಗ್ಗೆ ಪ್ರಸ್ತಾಪಿಸಿದ ಸಚಿವರು, " ಬೆಂಗಳೂರು ನಗರದ ಅಭಿವೃದ್ಧಿಗೆ ನಾವು ರೂ. 1800 ಕೋಟಿಗಳನ್ನು ಮೀಸಲಿರಿಸಿದ್ದೇವೆ. ಈ ಅನುದಾನವನ್ನು ಮುಂದಿನ ಮೂರು ವರ್ಷಗಳಲ್ಲಿ ಖರ್ಚು ಮಾಡಲಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನ ಉದ್ದಿಮೆಗಳು ಹಾಗು ಸಾರ್ವಜನಿಕರು ಬೆಂಗಳುರಿನಲ್ಲಿ ಸುಧಾರನೆ ಕಾಣಲಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿಗೆ ನಿರ್ಮಿಸಲಾಗುತ್ತಿರುವ ವೇಗದೂತ ಮಾರ್ಗ ಸಿದ್ಧವಾಗಲಿದೆ. ಬೆಂಗಳೂರಿನ ರಸ್ತೆ ಹಾಗು ಪಾದಚಾರಿ ಮಾರ್ಗಗಳು ವಿಶಾಲಗೊಳ್ಳಲಿವೆ. ಬೃ. ಬೆಂ.ಮ.ಪಾ.ಗೆ ಸೇರಿಕೊಂಡ ಹೊಸ ಪ್ರದೇಶಗಳು ಕುಡಿಯುವ ನೀರನ್ನು ಪಡೆಯಲಿವೆ" ಎಂದು ವಿವರಿಸಿದರು.

ಭಾರತದ ಎರಡು ಪ್ರಮುಖ ಐ ಟಿ ಕಂಪನಿಗಳಾಗಿ ಇನ್ಫೋಸಿಸ್ ಹಾಗೂ ವಿಪ್ರೊ ಹೊರಹೊಮ್ಮಿದವು. ಪ್ರದಾನಿಸಲಾದ ಇತರ ಪ್ರಶಸ್ತಿಗಳೆಂದರೆ :
ನಂತರದಎರಡು ಪ್ರಮುಖ ಭಾರತೀಯ ಐ ಟಿ ಕಂಪನಿಗಳಿಗೆ ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರ
1. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಲಿ.
2. ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಲಿ.

ಮೊದಲ ಎರಡು ಬಹುರಾಷ್ಟ್ರೀಯ ಐಟಿ ಕಂಪನಿಗಳು
1. ಐ ಬಿ ಎಮ್ ಇಂಡಿಯಾ ಪ್ರೈ.ಲಿ.
2. ಅಕ್ಸೆಂಚರ್ ಸರ್ವಿಸಸ್ ಪ್ರೈ.ಲಿ.
ನಂತರದ ಎರಡು ಪ್ರಮುಖ ಬಹುರಾಷ್ಟ್ರೀಯ ಭಾರತೀಯ ಐ ಟಿ ಕಂಪನಿಗಳಿಗೆ ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರ
1. ಒರಾಕಲ್ ಇಂಡಿಯಾ ಪ್ರೈ.ಲಿ
2. ಹ್ಯೂಲೆಟ್ ಪ್ಯಕಾರ್ಡ್ ಗ್ಲೋಬಲ್ ಸಾಫ್ಟ್ ಲಿ.

ಮೊದಲ ಎರಡು ಭಾರತೀಯ ಐ ಟಿ ಇ ಎಸ್/ಬಿ ಪಿ ಓ ಸಂಸ್ಥೆಗಳು
1. ಇನ್ಫೋಸಿಸ್ ಬಿ ಪಿ ಓ ಲಿ.
2. ಫಸ್ಟ್ ಸೋರ್ಸ್ ಸಲ್ಯೂಷನ್ಸ್ ಲಿ.

ನಂತರದ ಎರಡು ಪ್ರಮುಖ ಭಾರತೀಯ ಐ ಟಿ ಇ ಎಸ್/ಬಿ ಪಿ ಓ ಕಂಪನಿಗಳಿಗೆ ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರ
1. ಹೆಚ್ ಟಿ ಎಮ್ ಟಿ ಗ್ಲೋಬಲ್ ಸಲ್ಯೂಷನ್ಸ್ ಲಿ.
2. ಆದಿತ್ಯ ಬಿರ್ಲಾ ಮಿನಾಕ್ಸ್ ವರ್ಲ್ಡ್‌ವೈಡ್ ಲಿ.

ನಂತರದ ಎರಡು ಪ್ರಮುಖ ಬಹುರಾಷ್ಟ್ರೀಯ ಭಾರತೀಯ ಐ ಟಿ ಇ ಎಸ್/ಬಿ ಪಿ ಓ ಕಂಪನಿಗಳಿಗೆ ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರ
1. ಗೋಲ್ಡ್‌ಮನ್ ಸಚ್ಸ್ ಸರ್ವಿಸಸ್ ಪ್ರೈ.ಲಿ.
2. ಗ್ಲೋಬಲ್-ಇ ಬಿಜಿನೆಸ್ ಆಪರೇಷನ್ಸ್ ಪ್ರೈ.ಲಿ.

ಅತ್ಯಧಿಕ ಉದ್ಯೋಗಿಗಳನ್ನು ಹೊಂದಿದ ಐ ಟಿ ಕಂಪನಿ

ಇನ್ಫೋಸಿಸ್ ಟೆಕ್ನಾಲಜೀಸ್ ಲಿ.

ಅತ್ಯಧಿಕ ಉದ್ಯೋಗಿಗಳನ್ನು ಹೊಂದಿದ ಐ ಟಿ ಇ ಎಸ್/ಬಿ ಪಿ ಓ ಕಂಪನಿ
ಇನ್ಫೋಸಿಸ್ ಬಿ ಪಿ ಓ ಲಿಮಿಟೆಡ್

ಅತ್ಯಧಿಕ ಮಹಿಳಾ ಉದ್ಯೋಗಿಗಗಳನ್ನು ಹೊಂದಿದ ಐ ಟಿ ಕಂಪನಿ
ವಿಪ್ರೊ ಲಿಮಿಟೆಡ್

ಅತ್ಯಧಿಕ ಮಹಿಳಾ ಉದ್ಯೋಗಿಗಗಳನ್ನು ಹೊಂದಿದ ಐ ಟಿ ಇ ಎಸ್/ಬಿ ಪಿ ಓ ಕಂಪನಿ
ಇನ್ಫೋಸಿಸ್ ಬಿ ಪಿ ಓ ಲಿ.

ಅತ್ಯಧಿಕ ಮಹಿಳಾ ವೃತ್ತಿಪರ ಉದ್ಯೋಗಿಗಗಳನ್ನು ಹೊಂದಿದ ಐ ಟಿ ಕಂಪನಿ
ಅಕ್ಸೆಂಚರ್ ಸರ್ವಿಸಸ್ ಪ್ರೈ.ಲಿ.

ಅತ್ಯಧಿಕ ಮಹಿಳಾ ವೃತ್ತಿಪರ ಉದ್ಯೋಗಿಗಗಳನ್ನು ಹೊಂದಿದ ಐ ಟಿ ಇ ಎಸ್/ಬಿ ಪಿ ಓ ಕಂಪನಿ
ಡಿಬಿಓಐ ಗ್ಲೋಬಲ್ ಸರ್ವಿಸಸ್ ಪ್ರೈ.ಲಿ.

ಉದಯೋನ್ಮುಖ ಎಸ್‌ಟಿಪಿಐ ಕಂಪನಿ: ಸ್ಟಾರ್ ಸಾಧನೆ
1. ಡ್ರೀಮ್ ಎಜೆಕ್ಸ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್
2. ಜೂಮ್ ಮೀಡಿಯಾಪ್ಲಸ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್
3. ಅಕ್ಟೀವ್‌ಕ್ಯೂಬ್ಸ್ ಸಲ್ಯೂಷನ್ಸ್ ಇಂಡಿಯಾ ಪ್ರೈ ಲಿಮಿಟೆಡ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ಉದಯೋನ್ಮುಖ ಎಸ್‌ಟಿಪಿಐ ಕಂಪನಿ: ವಿನೂತನ ಕಂಪನಿ
ಇಂಡಸ್ ಎಡ್ಜ್ ಇನ್ನೋವೇಷನ್ ಪ್ರೈ ಲಿಮಿಟೆಡ್

ಮೊದಲ ಎರಡು ಸೆಮಿಕಂಡಕ್ಟರ್/ ಐಸಿ ವಿನ್ಯಾಸ ಕಂಪನಿಗಳು
1ಟೆಕ್ಸಾಸ್ ಇನ್‌ಸ್ಟ್ರೂಮೆಂಟ್ಸ್ (ಐ) ಪ್ರೈ ಲಿಮಿಟೆಡ್
2.ಇಂಟೆಲ್ ಟೆಕ್ನಾಲಜೀಸ್ (ಐ) ಪ್ರೈ ಲಿಮಿಟೆಡ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ನಂತರದ ಮೊದಲ ಎರಡು ಸೆಮಿಕಂಡಕ್ಟರ್/ ಐಸಿ ವಿನ್ಯಾಸ ಕಂಪನಿಗಳು
1.ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ ಇಂಡಿಯಾ ಪ್ರೈ ಲಿಮಿಟೆಡ್
2.ಇನ್‌ಫಿನೊನ್ ಟೆಕ್ನಾಲಜೀಸ್ ಇಂಡಿಯಾ ಪ್ರೈ ಲಿಮಿಟೆಡ್

ವೇಗದ ವೃದ್ಧಿ ಹೊಂದುತ್ತಿರುವ ಮೊದಲ ಎರಡು ಎಸ್‌ಎಂಇ ಕಂಪನಿ (ಸೆಮಿಕಂಡಕ್ಟರ್/ ಐಸಿ ವಿನ್ಯಾಸ) ಕಂಪನಿಗಳು
1.ಏರಿಸ್‌ಗ್ಲೋಬಲ್ ಸಾಫ್ಟ್‌ವೇರ್ ಪ್ರೈ ಲಿಮಿಟೆಡ್
2.ಮೆಕ್‌ಎಂಐ ಸಿಸ್ಟಮ್ ಪ್ರೈ ಲಿಮಿಟೆಡ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ನಂತರದ ವೇಗದ ವೃದ್ಧಿ ಹೊಂದುತ್ತಿರುವ ಮೊದಲ ಎರಡು ಎಸ್‌ಎಂಇ ಕಂಪನಿ (ಸೆಮಿಕಂಡಕ್ಟರ್/ ಐಸಿ ವಿನ್ಯಾಸ) ಕಂಪನಿಗಳು
1.ಮಾರ್‌ಲ್ಯಾಬ್ ಸಾಫ್ಟ್‌ವೇರ್ ಪ್ರೈ ಲಿಮಿಟೆಡ್
2.ಸಿಡ್ವಿನ್ ಕೋರ್ಟೆಕ್ ಇಂಡಿಯಾ ಪ್ರೈ ಲಿಮಿಟೆಡ್

ಮೊದಲ ಎರಡು ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಕಂಪನಿಗಳು
1.ಅಮೆರಿಕನ್ ಪವರ್ ಕನ್ಸರ್‌ವಿಷನ್ (ಐ) ಪ್ರೈ ಲಿಮಿಟೆಡ್
2.ಜಿಇ ಮೆಡಿಕಲ್ ಸಿಸ್ಟಮ್ (ಐ) ಪ್ರೈ ಲಿಮಿಟೆಡ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ನಂತರದ ಮೊದಲ ಎರಡು ಕಂಪನಿಗಳು (ಎಲೆಕ್ಟ್ರಾನಿಕ್ ಮತ್ತು ಹಾರ್ಡ್‌ವೇರ್)
1.ವಿಪ್ರೋ ಜಿಇ ಹೆಲ್ತ್‌ಕೇರ್ ಪ್ರೈ ಲಿಮಿಟೆಡ್
2.ಎಲ್‌ಕೊಟೆಕ್ ಎಲೆಕ್ಟ್ರಾನಿಕ್ಸ್ (ಇಂಡಿಯಾ) ಪ್ರೈ ಲಿಮಿಟೆಡ್

ಮೊದಲ ಎರಡು ರಫ್ತುದಾರರು (ಮೈಸೂರಿನ ಅತ್ಯುತ್ತಮ ಐಟಿ/ಐಟಿಇಎಸ್ ಕಂಪನಿಗಳು)
1.ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್
2.ಲಾರ್ಸನ್ ಅಂಡ್ ಟೂರ್ಬೊ ಲಿಮಿಟೆಡ್ -ಇಎಂಎಸ್‌ವೈಎಸ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ನಂತರದ ಮೊದಲ ಎರಡು ಮುಂಚೂಣಿ ರಫ್ತು ಕಂಪನಿಗಳು (ಮೊದಲ ಎರಡು ರಫ್ತುದಾರರು (ಮೈಸೂರಿನ ಅತ್ಯುತ್ತಮ ಐಟಿ/ಐಟಿಇಎಸ್ ಕಂಪನಿಗಳು)
1.ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್
2.ಲಾರ್ಸನ್ ಅಂಡ್ ಟೂರ್ಬೊ ಇನ್‌ಫೋಟೆಕ್ ಲಿಮಿಟೆಡ್

ಮೊದಲ ಎರಡು ರಫ್ತುದಾರರು (ಮಂಗಳೂರು/ಮಣಿಪಾಲದ ಅತ್ಯುತ್ತಮ ಐಟಿ/ಐಟಿಇಎಸ್ ಕಂಪನಿಗಳು)
1.ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್
2.ದಿವ್ಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ ಲಿಮಿಟೆಡ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ನಂತರದ ಮೊದಲ ಎರಡು ಮುಂಚೂಣಿ ರಫ್ತು ಕಂಪನಿಗಳು (ಮಂಗಳೂರು/ಮಣಿಪಾಲದ ಅತ್ಯುತ್ತಮ ಐಟಿ/ಐಟಿಇಎಸ್ ಕಂಪನಿಗಳು)
1.ರೋಬೊಸಾಫ್ಟ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್
2.ಫಸ್ಟ್ ಇಂಡಿಯನ್ ಕಾರ್ಪೋರೇಷನ್ ಪ್ರೈ ಲಿಮಿಟೆಡ್

ಮೊದಲ ಎರಡು ರಫ್ತುದಾರರು (ಹುಬ್ಬಳ್ಳಿಯ ಅತ್ಯುತ್ತಮ ಐಟಿ/ಐಟಿಇಎಸ್ ಕಂಪನಿಗಳು)
1.ಎನ್.ಎಸ್. ಇನ್ಫೋಟೆಕ್ ಲಿಮಿಟೆಡ್
2.ಸಂಕಲ್ಪ ಸೆಮಿಕಂಡಕ್ಟರ್ ಪ್ರೈ ಲಿಮಿಟೆಡ್

ಉತ್ಕೃಷ್ಟ ಸಾಧನೆಯ ಪ್ರಮಾಣಪತ್ರದ ನಂತರದ ಮೊದಲ ಎರಡು ಮುಂಚೂಣಿ ರಫ್ತು ಕಂಪನಿಗಳು (ಹುಬ್ಬಳ್ಳಿಯ ಅತ್ಯುತ್ತಮ ಐಟಿ/ಐಟಿಇಎಸ್ ಕಂಪನಿಗಳು)
1.ಕತ್ವಾ ಇನ್‌ಫೋಟೆಕ್ ಲಿಮಿಟೆಡ್
2.ನೈಲ್‌ಸಾಫ್ಟ್ ಲಿಮಿಟೆಡ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X