ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಪುರ ಟೆಸ್ಟ್ : ಭಾರತಕ್ಕೆ ಜಯ, ಸರಣಿ ಕೈಗೆ

By Staff
|
Google Oneindia Kannada News

ನಾಗಪುರ, ನ. 10 : ಇಲ್ಲಿನ ವಿದರ್ಭ ಕ್ರೀಡಾಂಗಣದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ 172 ರನ್ ಗಳ ಐತಿಹಾಸಿಕ ಗೆಲುವು ದಾಖಲಿಸಿದೆ. ಭಾರತೀಯ ಬೌಲರ್ ಗಳ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಟರ್ ಪಡೆ 209 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲನುಭವಿಸುವ ಮೂಲಕ 2-0 ಅಂತರದಿಂದ ಸರಣಿಯನ್ನು ಕಳೆದುಕೊಂಡಿತು.

ಅಂತಿಮ ಟೆಸ್ಟ್ ನ ಅಂತಿಮ ದಿನವಾದ ಇಂದು ಭಾರತ ನೀಡಿದ್ದ 382 ರನ್ ಗಳ ಸವಾಲಿನೊಂದಿಗೆ ಆಟ ಆರಂಭಿಸಿದ ಆಸ್ಟ್ರೇಲಿಯಾ ಆಟಗಾರಿಗೆ ಭಾರತೀಯ ಬೌಲರ್ ಗಳ ಶಿಸ್ತು ಬದ್ದ ಬೌಲಿಂಗ್ ಅದರಲ್ಲಿ ಮುಖ್ಯವಾಗಿ ಸ್ಪಿನ್ನರ್ ಗಳು ಕಾಂಗರೂ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನರಾದರು. ಪ್ರತಿ ರನ್ ಪಡೆಯಲು ಆಸೀಸ್ ಆಟಗಾರರು ಹರಸಾಹಸ ನಡೆಸಬೇಕಾಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಹೇಡನ್(72) ಬಿಟ್ಟರೆ ಯಾವ ಆಟಗಾರರು ಹೆಚ್ಚು ಹೊತ್ತು ಕ್ರಿಸ್ ಬಳಿ ಉಳಿಯಲು ಸಾಧ್ಯವಾಗಲಿಲ್ಲ. ಉಪಹಾರದ ಹೊತ್ತಿಗೆ ಕಾಂಗರೂ ಪಡೆ ಎಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ಈ ಮೂಲಕ ಭಾರತ ತಂಡ ಐತಿಹಾಸಿಕ ಜಯ ದಾಖಲಿಸುವುದರ ಜೊತೆಗೆ 2-0 ಸರಣಿಯನ್ನು ತನ್ನದಾಗಿಸಿಕೊಂಡಿತು.

ನಿರೀಕ್ಷೆಯಂತೆ ಈ ಟೆಸ್ಟ್ ನಲ್ಲಿ 12 ವಿಕೆಟ್ ಗಳನ್ನು ಗಳಿಸಿರುವ ಆಸೀಸ್ ಬೌಲರ್ ಜಾಸನ್ ಕ್ರೇಜಾ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು. ಗವಾಸ್ಕರ್-ಬಾರ್ಡರ್ ಸರಣಿ ಟ್ರೋಫಿಯನ್ನು ಅನಿಲ್ ಕುಂಬ್ಳೆ ಹಾಗೂ ಮಹೇಂದ್ರ ಸಿಂಗ್ ಧೋನಿ ಸ್ವೀಕರಿಸಿದರು. ಜೀವಮಾನದ ಕೊನೆಯ ಟೆಸ್ಟ್ ಆಡಿದ ಬಂಗಾಲಿ ದಾದಾ ಸೌರವ್ ಗಂಗೂಲಿ ಪ್ರಥಮ ಇನ್ನಿಂಗ್ಸ್ ಆಕರ್ಷಕ ಅರ್ಧ ಶತಕ ಸಿಡಿಸಿದ್ದರು, ಆದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಸೌರವ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಭಾರತ ತಂಡದ ಟೆಸ್ಟ್ ತಂಡದ ನಾಯಕರಾಗಿದ್ದ ಅನಿಲ್ ಕುಂಬ್ಳೆ ಅವರಿಗೂ ಕೂಡಾ ಇದು ಪಂದ್ಯ ಅಂತಿಮ ಪಂದ್ಯವಾಗಿತ್ತು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಇಶಾಂತ್ ಶರ್ಮ್ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು. ಇದುವರೆವಿಗೂ ನಾಯಕತ್ವ ವಹಿಸಿಕೊಂಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದ ಕೀರ್ತಿಹೊಂದಿರುವ ಧೋನಿ, ಹಿರಿಯ ಆಟಗಾರರಿಗೆ ವಿದಾಯ ಹೇಳಿದರು.

ಭಾರತ ಪ್ರಥಮ ಇನ್ನಿಂಗ್ಸ್ - 441
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ - 355
ಭಾರತ ದ್ವಿತೀಯ ಇನ್ನಿಂಗ್ಸ್ - 298
ಆಸ್ಟೇಲಿಯಾ ದ್ವಿತೀಯ ಇನ್ನಿಂಗ್ಸ್ - 209
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X