ಹೊಗೇನಕಲ್ ಯೋಜನೆ ಸ್ಥಗಿತಗೊಳಿಸುವುದಿಲ್ಲ

ನವದೆಹಲಿ, ನ. 10 : ಹೊಗೇನಕಲ್ ನೀರಾವರಿ ಯೋಜನೆಗೆ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಈ ಯೋಜನೆಯನ್ನು ಮುಂದುವರೆಸುವುದಾಗಿ ತಮಿಳುನಾಡಿನ ಕಾನೂನು ಮತ್ತು ಲೋಕೋಪಯೋಗಿ ಸಚಿವ ಅಣ್ಣಾದೊರೈ ಮುರುಗನ್ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸರ್ಕಾರ ಸಿದ್ಧವಾಗಿದೆ. ಕರ್ನಾಟಕದ ವಿರೋಧದಿಂದ ಈ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದರು. ನಮ್ಮ ನಿಲುವು ಸ್ಪಷ್ಟವಾಗಿದೆ, ಯಾವುದೇ ಅಡ್ಡಿ ಆತಂಕಗಳು ಎದುರಾದರೂ ನಾವು ಯೋಜನೆಯನ್ನು ಕೊನೆಗೊಳಿಸಿಯೇ ಸಿದ್ಧ ಎಂದು ಖಂಡುತುಂಡಾಗಿ ಉತ್ತರ ನೀಡಿದ್ದಾರೆ.

1334 ಕೋಟಿ ರುಪಾಯಿ ವೆಚ್ಚದ ಈ ಯೋಜನೆಯನ್ನು ಜಪಾನೀಸ್ ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಕೋಆಪರೇಷನ್ (ಜೆಬಿಐಸಿ) ಹಣಕಾಸಿನ ನೆರವಿನಿಂದ ಮಾಡಲಾಗುತ್ತಿದೆ. ಈಗಾಗಲೇ ನಿಗದಿಪಡಿಸಿದಂತೆಯೇ ಯೋಜನೆಯ ಕಾಮಗಾರಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಯೋಜನೆಯಲ್ಲಿ ವಿವಾದವಿದೆ ಎಂದು ಜೆಬಿಐಸಿ ಗೆ ಮನವರಿಕೆ ಮಾಡಿಕೊಡುವುದಾಗಿ ಕರ್ನಾಟಕ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಮುರುಗನ್ ಈ ರೀತಿ ಪ್ರತ್ಯುತ್ತರ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+