ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೇಗಾಂವ್ ಸ್ಫೋಟ: ಸ್ವಾಮೀಜಿ ಮೇಲೆ ಶಂಕೆ

By Staff
|
Google Oneindia Kannada News

ಮುಂಬೈ, ನ. 10 : ಮಾಲೇಗಾಂವ್ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳವಳಕಾರಿ ಅಂಶಗಳು ಬೆಳಕಿಗೆ ಬರತೊಡಗಿವೆ. ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರ ಬಂಧನದ ಬೆನ್ನಲ್ಲೇ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾದ ಗುಜರಾತಿನ ಡಂಗಾಸ್ ಜಿಲ್ಲೆಯಲ್ಲಿರುವ ಅಸೀಮಾನಂದ ಸ್ವಾಮೀಜಿಯನ್ನು ಬಂಧಿಸಿರುವ ಮಹಾರಾಷ್ಟ್ರ ಎಟಿಎಸ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಈಗಾಗಲೇ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಭಯೋತ್ಪಾನೆ ನಿಗ್ರಹ ಪೋಲೀಸರು ನಾಸಿಕ್ ನ್ಯಾಯಾಲಯದ ಆದೇಶದ ಮೇಲೆ ಜೈಲಿನಲ್ಲಿರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಗ್ಯಾಸಿಂಗ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ವಿಚಾರಣೆಯಲ್ಲಿ ಕೆಲ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಪ್ರಗ್ಯಾಸಿಂಗ್ ಠಾಕೂರ್ ನೀಡಿದ ಮಾಹಿತಿ ಮೇರೆಗೆ ಅವರ ಜೊತೆಗೆ ಸಂಪರ್ಕವಿರುವ ಹಾಗೂ ದೂರವಾಣಿ ಕರೆಗಳು ಮಾಡಿರುವ ಸಾಕ್ಷಿಗಳು ದೊರೆತಿದ್ದರಿಂದ ಗುಜರಾತಿನ ಅಸೀಮಾನಂದ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಗುಜರಾತಿನ ಡಂಗಾಸ್ ಜಿಲ್ಲೆಯಲ್ಲಿರುವ ಆಸೀಮಾನಂದ ಸ್ವಾಮೀಜಿ ಅಶ್ರಮಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಮಹಾರಾಷ್ಟ್ರ ಎಟಿಎಸ್ ತಂಡ ಸ್ವಾಮೀಜಿ ಕಾರು ಚಾಲಕನನ್ನೂ ಪ್ರಶ್ನಿಸಿದೆ. ಆದರೆ ಅಲ್ಲಿನ ಜನರು ಸ್ವಾಮೀಜಿ ಮೇಲೆ ಮಹಾರಾಷ್ಟ್ರ ಪೊಲೀಸರು ಮಾಡಿರುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇಂತಹ ಕೃತ್ಯದಲ್ಲಿ ಶ್ರೀಗಳು ಭಾಗಿಯಾಗಿದ್ದಾರೆ ಎಂದು ಉಹಿಸಿಕೊಳ್ಳುವುದು ಕಷ್ಟ ಎನ್ನುವುದು ಅಲ್ಲಿನ ಪ್ರತಿ ವ್ಯಕ್ತಿಗಳ ಅಭಿಪ್ರಾಯವಾಗಿದೆ.

ಪುರೋಹಿತ ಮೇಲೆ ಮೋಕಾ ಕಾಯ್ದೆ ?
ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಿರುವ ನಿವೃತ್ತ ಸೇನಾಧಿಕಾರಿ ಶ್ರೀಕಾಂತ್ ಪುರೋಹಿತ ವಿರುದ್ಧ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಮೋಕಾ(mcoca) ಕಾಯ್ದೆ ಹೂಡಲು ನಿರ್ಧರಿಸಿದೆ. ಮಾಲೇಗಾಂವ್ ಸ್ಫೋಟಕ್ಕೆ ಸ್ಫೋಟಕಗಳನ್ನು ಒದಗಿಸಿರುವುದು ಸೇರಿ ಧನ ಸಹಾಯ ಮಾಡಿರುವ ಅಂಶವನ್ನು ನಾಶಿಕ್ ನ್ಯಾಯಾಲಯದಲ್ಲಿ ಪುರೋಹಿತ ಒಪ್ಪಿಕೊಂಡಿದ್ದ. ಇದರ ಜೊತೆಗೆ ಪುರೋಹಿತ ನಿಕಟವರ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

ಪ್ರಗ್ಯಾ ಸಿಂಗ್ ಠಾಕೂರ್ ಆರೋಪಿಯಲ್ಲ. ಅವರ ಬಂಧನದಲ್ಲಿ ರಾಜಕೀಯ ಅಡಗಿದೆ ಎಂದು ಬಿಜೆಪಿ, ಸಂಘ ಪರಿವಾರ ಹಾಗೂ ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆ ಸಾಧ್ವಿ ಬೆನ್ನಿಗೆ ನಿಂತಿದ್ದಾರೆ. ಕಳೆದ ಸೆಪ್ಟೆಂಬರ್ 29 ರಂದು ಮಾಲೇಗಾಂವ್ ನಲ್ಲಿ ನಡೆದ ಸ್ಫೋಟದಲ್ಲಿ 5 ಮೃತಪಟ್ಟಿದ್ದರು. 30 ಕ್ಕೊ ಅಧಿಕ ಜನರು ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X