ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಸಂಪುಟಕ್ಕೆ ಭಾರತೀಯೆ ಸೋನಾಲ್

By Staff
|
Google Oneindia Kannada News

sonal shah
ಶಿಕಾಗೋ, ನ. 7 : ಭಾರತೀಯ ಮೂಲದ ಸೋನಾಲ್ ಶಾ ಅವರನ್ನು ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಸಚಿವ ಸಂಪುಟದ ಸಲಹೆಗಾರರ ಮಂಡಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ.

40 ರ ಹರೆಯದ ಸೋನಾಲ್ ಅವರು ಗೂಗಲ್ ಕಂಪನಿಯಲ್ಲಿ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಹಾಗೂ ಸರ್ಕಾರಿಯೇತರ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸೋನಾಲ್ ಶಾ, 2003 ರಲ್ಲಿ ಅಮೆರಿಕದ ಆರ್ಥಿಕ ತಜ್ಞೆ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಭಾರತೀಯ ಮೂಲದ ಪ್ರೀತಿ ಬನ್ಸಾಲ್ ಅವರು ಬರಾಕ್ ಒಬಾಮಾ ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದನ್ನು ನೆನೆಪಿಸಿಕೊಳ್ಳಬಹುದು. ಪ್ರೀತಿ ಬನ್ಸಾಲ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯತೆ ಗಳಿಸಿದವರನ್ನು ಅಮೆರಿಕದ ಸರ್ಕಾರ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ. ಸೋನಾಲ್ ಶಾ ನಂತರ ನೀರಾ ಟೆಂಡನ್ ಎಂಬ ಭಾರತೀಯಳು ಒಬಾಮಾ ಸಂಪುಟ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ನೀರಾ ಟೆಂಡನ್ ಹಿಲರಿ ಕ್ಲಿಂಟನ್ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X