ನನ್ನ ಪುತ್ರ ದೇಶದ್ರೋಹಿಯೇ ?!: ಆಳ್ವ

ನವದೆಹಲಿ, ನ. 7 : ಕರ್ನಾಟಕ ವಿಧಾನಸಭೆಯ ಚುನಾವಣೆ ವೇಳೆ ಪಕ್ಷದ ಕೆಲ ನಾಯಕರು ಟಿಕೆಟ್ ಗಳನ್ನು ಮಾರಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಆರೋಪಿಸಿದ್ದಾರೆ. ಅನೇಕ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ನಲ್ಲಿನ ಭಿನ್ನಾಭಿಪ್ರಾಯಕ್ಕೆ ಅಳ್ವ ತುಪ್ಪ ಸುರಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ತಮ್ಮ ಪುತ್ರ ನಿವೇದಿತ್ ಹಾಗೂ ಜಾಫರ್ ಷರೀಫ್ ರ ಮೊಮ್ಮಗನಿಗೆ ಟಿಕೆಟ್ ನಿರಾಕರಿಸಿರುವುದು ಅಳ್ವ ಕೋಪಕ್ಕೆ ಕಾರಣವಾಗಿದೆ. ಅನೇಕ ದಿನಗಳಿಂದ ಕುದಿಯುತ್ತಿದ್ದ ಅತೃಪ್ತಿಯನ್ನು ಹೊರಹಾಕಿರುವ ಅವರು, ರಾಜ್ಯದ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚೌಹಾನ್ ಮತ್ತು ರಾಜ್ಯದ ಮುಖಂಡರ ಮೇಲೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಯಾವ ನಾಯಕರ ಹೆಸರನ್ನೂ ಪ್ರಸ್ತಾಪಿಸದೇ ತೀವ್ರ ಟೀಕೆ ಮಾಡಿರುವ ಆಳ್ವ, ಕಳೆದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಗಳನ್ನು ಮುಂಚಿತವಾಗಿಯೇ ಮಾರಿಕೊಳ್ಳಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಛತ್ತೀಸ್ ಗಢದಲ್ಲಿ 10 ಕ್ಕೊ ಹೆಚ್ಚು ನಾಯಕರ ಮಕ್ಕಳಿಗೆ ಟಿಕೆಟ್ ನೀಡಿಲ್ಲವೇ, ಹೀಗಿದ್ದಾಗಿಯೋ ಕರ್ನಾಟಕದಲ್ಲೇಕೆ ಈ ನೀತಿ ಅನುಸರಿಸಲಾಯಿತು. ನನ್ನ ಪುತ್ರ ನಿವೇದಿತ್ ಮತ್ತು ಜಾಫರ್ ಷರೀಫ್ ಮೊಮ್ಮಗ ದೇಶದ್ರೋಹಿಗಳೆ, ಭಯೋತ್ಪಾದಕರೆ ಎಂದು ಆಳ್ವ ಖಾರವಾಗಿ ಮಾತನಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಈ ಬೆಳವಣಿಗೆ ಭಾರಿ ಕುತೂಹಲ ಕೆರಳಿಸಿದೆ. ಮಾರ್ಗರೆಟ್ ಆಳ್ವ, ಸಿದ್ಧರಾಮಯ್ಯ ಹಾಗೂ ಜಾಫರ್ ಷರೀಫ್ ಮಾಯಾವತಿಯವರ ಬಿಎಸ್ಪಿ ಸೇರಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+