ಹಂಪಿ ಉತ್ಸವದಲ್ಲಿ ರೆಡ್ಡಿಗಳ ಕಾರುಬಾರು

is kannada being neglected in hampi utsavಹಂಪಿಯಲ್ಲಿ ನಿನ್ನೆ ಅದ್ದೂರಿಯಾಗಿ, ಆಡ೦ಬರವಾಗಿ ಮತ್ತು ವೈಭವೋಪೇತವಾಗಿ ಹಂಪಿ ಉತ್ಸವ ಮುಕ್ತಾಯಗೊಂಡಿತು. ನಾಡಿನ ಸಾಂಸ್ಕೃತಿಕ ಉತ್ಸವ ಆಗುವ ಬದಲು ಬಿಜೆಪಿ ಮತ್ತು ಸರಕಾರಿ ಕಾರ್ಯಕ್ರಮದಂತೆ ನಡೆದಿದ್ದೇ ಈ ಉತ್ಸವದ ವಿಶೇಷ. ಎಲ್ಲೆಲ್ಲೂ ಅವ್ಯವಸ್ಥೆ. ಉತ್ಸವ ಏನೋ ಅದ್ದೂರಿಯಾಗಿತ್ತು ಆದರೆ ಆತ್ಮೀಯ ಭಾವದಿಂದ ದೂರವಾಗಿತ್ತು. ನಿರೂಪಕರು, ರಾಜಕಾರಿಣಿಗಳು, ಅವರ ಚೇಲಾಗಳು ವೇದಿಕೆಯನ್ನ ಅಗತ್ಯಕ್ಕಿ೦ತ ಜಾಸ್ತಿಯಾಗಿ ಉಪಯೋಗಿಸಿಕೊಂಡರು.

ವಿಜಯನಗರದ ಶಾಸಕ ಆನಂದ್ ಸಿಂಗ್ ಅವರನ್ನು ಮೂಲೆಗುಂಪಾಗಿಸಿ, ಕಾರ್ಯಕ್ರಮಕ್ಕೆ ತಮ್ಮ ಹಣ ಸುರಿದಿದ್ದ ರೆಡ್ಡಿ ಬಳಗ ಎಲ್ಲೆಡೆ ವಿಜೃಂಭಿಸಿದರು. ರೆಡ್ಡಿಗಳ ದುಡ್ಡು ವೇದಿಕೆಗೆ ಸಿಂಗಾರ ತಂದಿತೆ ಹೊರತೂ ಉತ್ಸವದ ಎಲ್ಲಾ ವ್ಯವಸ್ಥೆಯನ್ನು ತಲುಪಲಿಲ್ಲ. ಜನ ಸಾಮಾನ್ಯರಿಗೆ ಕನಿಷ್ಠ ಮೂಲಭೂತಸೌಲಭ್ಯಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲತೆ ಕಂಡುಬಂತು.

ಸಮಾರೋಪ ಕಾರ್ಯಕ್ರಮ ಮುಗಿದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಇಲ್ಲಿನ ವಾಡಿಕೆ, ಆದರೆ ಸಾಂಸ್ಕೃತಿಕ ಕಾರ್ಯಕ್ರಮದ ಮದ್ಯೆ ಸಮಾರೋಪ ಆಯೋಜಿಸಿ ಸೋನು ನಿಗಮ್ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಯಿತು. ವೆಂಕಟೇಶ್ ಕುಮಾರ್ ಗೆ ಗಾಯನಕ್ಕೆ ಅವಕಾಶ ನೀಡದೇ ಮೊದಲ ದಿನವೇ ವಾಪಸ್ಸು ಕಳುಹಿಸಿದ್ದು ಮುಜುಗರಕ್ಕೆ ಈಡಾಯಿತು.ಕವಿಗೋಷ್ಠಿಯನ್ನು ಮುಖ್ಯವೇದಿಕೆಯಿಂದ ಬಿಸಿಲಲ್ಲಿ ಬೇರೆ ವೇದಿಕೆಗೆ ಸ್ಥಳಾಂತರಿಸಿದ್ದು, ಗಲಾಟೆಯಲ್ಲಿ ಮುಗಿದ ಆಶಾ ಭೋಂಸ್ಲೆ ಕಾರ್ಯಕ್ರಮ.. ಹೀಗೆ ಎಲ್ಲೆಡೆ ಅವ್ಯವಸ್ಥೆ ಎದ್ದು ಕಾಣುತ್ತಿತ್ತು.

ಹಂಪಿ ಉತ್ಸವಕ್ಕೆ ಜನಪ್ರಿಯತೆ ತಂದುಕೊಟ್ಟಿದ್ದ ಎಂ ಪಿ ಪ್ರಕಾಶ್ ಗೆ, ಸ್ಪೀಕರ್ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಚಂದ್ರು ಗೆ, ಪ್ರತಿಪಕ್ಷದ ಯಾವ ನಾಯಕರುಗಳಿಗೂ ಆಹ್ವಾನ ಹೋಗಿರಲಿಲ್ಲ. ಇಷ್ಟೆಲ್ಲ ಕಾರ್ಯಕ್ರಮದ ಅವ್ಯವಸ್ಥೆ ಆಗಿದ್ದರೆ ನಮ್ಮ ನಾಡಿನಲ್ಲೇ ಕನ್ನಡ "ಮಾಯ".

ವೇದಿಕೆಯ ನಿರ್ಮಾಣದ ಹೊಣೆಯನ್ನು ನಟ "ಡೈಲಾಗ್ ಕಿಂಗ್" ಸಾಯಿಕುಮಾರ್ ಗೆ ನೀಡಲಾಗಿತ್ತು.ಇಲ್ಲಿ ಬಳಕೆಯಾದ ಕಾರ್ಮಿಕರಲ್ಲಿ ಹುಡುಕಿದರೂ ಕನ್ನಡದವರು ಇರಲಿಲ್ಲ. ಎಲ್ಲ ಆಂಧ್ರಮಯ. ಎಲ್ಲ ಕಾರ್ಮಿಕರನ್ನ ಆಂಧ್ರಪ್ರದೇಶದಿಂದ ಕರೆ ತರಲಾಗಿತ್ತು. "ಇಂಡಿಯಾ ಮಿಷನ್" ಎನ್ನುವ ಕಾರ್ಯಕ್ರಮದಲ್ಲಿ ಎಲ್ಲ ಭಾಷೆಗೆ ಮನ್ನಣೆ ನೀಡಿ ಕನ್ನಡ ಕಾರ್ಯಕ್ರಮಕ್ಕೆ ಅವಕಾಶ ನೀಡಲಿಲ್ಲ. ಉತ್ಸವದಲ್ಲಿ ಅದ್ದೂರಿತನ ಇದ್ದರೂ ಕನ್ನಡೇತರ ಭಾವ, ಸಿನಿಮೀಯ ಸೆಟ್ ಗಳು ನಮ್ಮಜನಪದ ಸಂಸ್ಕೃತಿಯನ್ನು ಮರೆಮಾಚಿದ್ದವು. ಎಲ್ಲೆಲ್ಲೂ ರೆಡ್ಡಿಗಳದ್ದೆ ಕಾರುಬಾರು.

ನಮ್ಮ ನಾಡಿನಲ್ಲಿ ನಾವೇ ಮೂರನೇಯವರು!! ತಾಯಿ ಭುವನೇಶ್ವರಿಯೇ ಕಾಪಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+