ಕೆಜಿಎಫ್: ಬೆಮೆಲ್ ಕಾರ್ಮಿಕರ ಮುಷ್ಕರ

ಬೆಮೆಲ್ ಕಾರ್ಮಿಕರ ಸಂಘದ ಅವಧಿಯು ಅಕ್ಟೋಬರ್ 31ಕ್ಕೆ ಪೂರ್ಣಗೊಂಡಿದ್ದು, ಇದೀಗ ಹೊಸದಾಗಿ ಚುನಾವಣೆಯನ್ನು ನಡೆಸಲು ಆಡಳಿತ ಮಂಡಳಿಯು ಇನ್ನೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಕಾರ್ಮಿಕರ ಹಿತಾಸಕ್ತಿಯಿಂದ ಕೂಡಲೇ ಸಂಘದ ಚುನಾವಣೆಯನ್ನು ನಡೆಸಲು ಮುಂದಾಗಬೇಕೆಂದು ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಅಶೋಕ್‌ಲೋಣಿ, ಶ್ರೀನಿವಾಸನ್, ಇಕ್ಬಾಲ್ ಅಹ್ಮದ್, ಮತ್ತಿತರರು ನೇತೃತ್ವ ವಹಿಸಿದ್ದರು. ನೂರಾರು ಮಂದಿ ನೌಕರರು ಪ್ರತಿಭಟನೆಯಲ್ಲಿ ಹಾಜರಿದ್ದರು.
2.5 ಕೋಟಿ ರು. ಗಳ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ
ನಗರದಾದ್ಯಂತ ಹಲವು ವಾರ್ಡುಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಹಿಸಲು ನಗರಸಭೆಯು ಚಾಲನೆ ನೀಡಿದೆ.
ನಗರಸಭಾಧ್ಯಕ್ಷ ಎಂ.ಭಕ್ತವತ್ಸಲಂ, ಉಪಾಧ್ಯಕ್ಷೆ ಸಂಗೀತ ಶ್ರೀನಿವಾಸ್, ಪೌರಾಯುಕ್ತ ಆರ್.ಎಸ್.ಯರ್ರಪ್ಪ, ಎ.ಇ.ಇ. ಶ್ರೀಧರ ಅವರುಗಳು ನಗರದಾದ್ಯಂತ ಗುರುವಾರದಂದು ಸಂಜೆ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ, ಚರಂಡಿ ನಿರ್ಮಾಣ ಕೆಲಸ ಕಾಮಗಾರಿಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
(ದಟ್ಸ್ ಕನ್ನಡವಾರ್ತೆ)


Click it and Unblock the Notifications
