ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಆಯ್ಕೆ

By Staff
|
Google Oneindia Kannada News

ಮೈಸೂರು, ನ. 5 :ಹೆಡ್ ಕ್ವಾರ್ಟರ್,3-ಇಎಂಇ ಸೆಂಟರ್ ಇವರು ಯೂನಿಟ್ ಹೆಡ್ ಕ್ವಾರ್ಟರ್‍ಸ್ ಕೋಟಾ ಅಡಿಯಲ್ಲಿ 171/2 ಯಿಂದ 23 ವರ್ಷದೊಳಗಿನ ಯುದ್ಧ ವಿಧವೆ/ಮಾಜಿ ಸೈನಿಕರ/ಹಾಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಅವಲಂಬಿತ ಮಕ್ಕಳು ಹಾಗೂ ಸಹೋದರರಿಗೆ ಸೋಲ್ಜರ್ ಜನರಲ್ ಡ್ಯೂಟಿ ಮತ್ತು ಟೆಕ್ನೀಷಿಯನ್ ಹುದ್ದೆಗಳಿಗೆ ನಂ.3, ಇ ಎಂ ಇ ಸೆಂಟರ್, ಭೂಪಾಲ್‌ನಲ್ಲಿ ನವೆಂಬರ್ 17 ರಿಂದ 30ರವರೆಗೆ ಆಯ್ಕೆ ನಡೆಸಲಿದ್ದಾರೆ.

ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ 171/2 ರಿಂದ 21 ವರ್ಷದೊಳಗಿನ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಕನಿಷ್ಠ ಶೇಕಡ 45 ಅಂಕ ಗಳಿಸಿ ತೇರ್ಗಡೆಯಾದ ಅಭ್ಯರ್ಥಿಗಳು ಮತ್ತು ಟೆಕ್ನೀಷಿಯನ್ ಹುದ್ದೆಗೆ ದ್ವಿತೀಯ ಪಿಯುಸಿ.ಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಪಾಸಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ , ಜಿಲ್ಲಾಧಿಕಾರಿಗಳು / ತಹಸೀಲ್ದಾರ್ ಇವರಿಂದ ಪಡೆದ ಮೂಲ ನಿವಾಸಿ ಪ್ರಮಾಣ ಪತ್ರ, ಮುಖ್ಯೋಪಾಧ್ಯಾಯರು / ಪ್ರಾಂಶುಪಾಲರಿಂದ ಪಡೆದ ನಡವಳಿಕೆ ಪ್ರಮಾಣ ಪತ್ರ , ಶಾಲಾ / ಕಾಲೇಜು ಬಿಟ್ಟು ಆರು ತಿಂಗಳುಗಳಾಗಿದ್ದಲ್ಲಿ ಪೋಲೀಸ್ ಠಾಣೆಯಿಂದ ಪಡೆದ ನಡತೆ ಪ್ರಮಾಣ ಪತ್ರ , ಹಾಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಮಕ್ಕಳಾಗಿದ್ದಲ್ಲಿ ವೇತನ ಪುಸ್ತಕದ 1 ಮತ್ತು 2ನೇ ಪುಟದ ನಕಲು ಪ್ರತಿ, ಮಾಜಿ ಸೈನಿಕರಾಗಿದ್ದಲ್ಲಿ ಡಿಸ್ಚಾರ್ಜ್ ಪುಸ್ತಕದ ನಕಲು ಪ್ರತಿ, ಎನ್ ಸಿಸಿ / ಕ್ರೀಡಾ ಪ್ರಮಾಣ ಪತ್ರಗಳು ಮತ್ತು ಪಾಸ್‌ಪೋರ್ಟ್ ಅಳತೆಯ ಇತ್ತಿಚಿನ 10 ಭಾವಚಿತ್ರಗಳು, ಅವುಗಳಲ್ಲಿ 03 ಭಾವಚಿತ್ರಗಳು ಹಿಂಭಾಗದಲ್ಲಿ ದೃಢೀಕರಿಸಿರಬೇಕು.

ಹೆಚ್ಚಿನ ಮಾಹಿತಿಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ಇವರನ್ನು ಹಾಗೂ ದೂರವಾಣಿ ಸಂಖ್ಯೆ 0821-2425240ರ ಮೂಲಕ ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಆರ್ ಎಸ್ ವಿಶ್ವನಾಥ್ ತಿಳಿಸಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ಕೊಡಗಿನ ಸೈನಿಕ ಶಾಲೆ ಸೇರಲು ಅವಕಾಶ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X