ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಪುರ ಟೆಸ್ಟ್ : ಸಚಿನ್ 109, ಭಾರತ ಸುಸ್ಥಿತಿ

By Staff
|
Google Oneindia Kannada News

ನಾಗಪುರ, ನ. 6 : ಇಲ್ಲಿಯ ವಿದರ್ಭ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಹಣಾಹಣಿಯಲ್ಲಿ ಅತಿಥೇಯ ಭಾರತ 5 ವಿಕೆಟ್ ನಷ್ಟಕ್ಕೆ 311 ರನ್ ಪೇರಿಸುವ ಗೌರವಯುತ ಮೊತ್ತ ದಾಖಲಿಸುವ ಮೂಲಕ ಮೊದಲ ದಿನದ ಆಟವನ್ನು ಅಂತ್ಯಗೊಳಿಸಿತು.

ಮೊದಲ ದಿನದ ವಿಶೇಷಯತೆಯೆಂದರೆ ಬ್ಯಾಟಿಂಗ್ ಮಾಂತ್ರಿಕ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್(109) ತಮ್ಮ 40ನೇ ಶತಕವನ್ನು ಪೊರೈಸಿದ್ದು ಒಂದಡೆಯಾದರೆ, ಪಿರೋಜಾ ಷಾ ಕೋಟ್ಲಾ ಮೈದಾನ ಶತಕ ಗಳಿಸುವ ಮೂಲಕ ಆಸೀಸ್ ಬೌಲರ್ ಗಳ ಬೆವರಿಳಿಸಿದ್ದ ವಿವಿಎಸ್ ಲಕ್ಷ್ಮಣ ವಿದರ್ಭ ಮೈದಾನದಲ್ಲಿ ಕೂಡಾ ಮತ್ತೆ ಗುಡುಗಿ 64 ರನ್ ಗಳಿಸಿದರು. ಸಚಿನ್ ಮೊಹಾಲಿ ಟೆಸ್ಟ್ ನಲ್ಲಿ 88 ರನ್ ಗಳಿಸಿ ಔಟಾಗುವುದರೊಂದಿಗೆ ಶತಕದಿಂದ ವಂಚಿತರಾಗಿದ್ದರು. ಸಚಿನ್ ಕಾಂಗರೂಗಳ ವಿರುದ್ಧ 10 ಶತಕಗಳನ್ನು ಗಳಿಸಿದಂತಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಆರಂಭಿಕ ಜೋಡಿಯಾಗಿ ವೀರೇಂದ್ರ ಸೆಹ್ವಾಗ್ ಮತ್ತು ಹೊಸಬ ತಮಿಳುನಾಡಿನ ಮುರಳಿ ವಿಜಯ್ ನನ್ನು ಕಣಕ್ಕಿಳಿಸಿದರು. ಟೆಸ್ಟ್ ತಂಡದಲ್ಲಿ ಸ್ಥಾನ ವಿಜಯ್ ಪ್ರಥಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ 33 ರನ್ ಗಳಿಸಿ ಫೆವಿಲಿಯನ್ ಗೆ ನಡೆದರು. ಸತತ ವೈಫಲ್ಯ ಕಂಡಿರುವ ರಾಹುಲ್ ದ್ರಾವಿಡ್ ಇಂದು ಮತ್ತೆ ಶೂನ್ಯದಲ್ಲಿ ಔಟಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಗೊಳಿಸಿದರು.

ನಂತರ ಮೈದಾನಕ್ಕಿಳಿದ ಬ್ಯಾಟಿಂಗ್ ದಂತಕತೆ ಸಚಿನ್ ನಿಧಾನವಾಗಿ ತಂಡದ ಮೊತ್ತವನ್ನು ಹೆಚ್ಚಿಸತೊಡಗಿದರು. ಅತ್ತ ವೀರೇಂದ್ರ ಸೆಹ್ವಾಗ್(66) ಎಂದಿನ ತಮ್ಮ ಶೈಲಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿ ಹೊರನಡೆದರು. ಟೆಸ್ಟ್ ಇತಿಹಾಸದಲ್ಲಿ ಹೆಚ್ಚು ಶತಕ ಗಳಿಸಿರುವ ಸಚಿನ್ 109 ರನ್ ಗಳಿಸಿ ಜಾನ್ಸನ್ ಗೆ ವಿಕೆಟ್ ಒಪ್ಪಿಸಿದರು. ಸೌರವ್ ಗಂಗೂಲಿ 27* ಹಾಗೂ ಧೋನಿ 4* ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ ಭಾರತ 311 ಗಳಿಸಿತು. ಆಸ್ಟ್ರೇಲಿಯಾ ಪರ ಜೆ.ಜೆ.ಕ್ರೇಜಾ ಮೂರು ವಿಕೆಟ್ ಪಡೆದರೆ, ವಾಟ್ಸನ್ ಹಾಗೂ ಜಾನ್ಸನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

(ದಟ್ಸ್ ಕ್ರಿಕೆಟ್ ವಾರ್ತೆ)

ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X