ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠೆ ಪ್ರಶ್ನೆಯಾದ ಹಾಲಿನ ದರ ಏರಿಕೆ

By Staff
|
Google Oneindia Kannada News

ಬೆಂಗಳೂರು, ನ. 6 : ಕೆಎಂಎಫ್ ಹಾಲಿನ ದರ ಏರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಹಕಾರಿ ಇಲಾಖೆಯ 15 ಅಧಿಕಾರಿಗಳು ಕೆಎಂಎಫ್ ಕಚೇರಿ ನೀಡಿ ದಾಖಲೆಗಳ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ನಡುವಿನ ಜಟಾಪಟಿ ಮತ್ತಷ್ಟು ಉಲ್ಭಣಗೊಂಡಂತಾಗಿದೆ.

ಕೆಎಂಎಫ್ ಇತ್ತೀಚಿನ ದಿನಗಳಲ್ಲಿ ಭಾರಿ ನಷ್ಟ ಅನುಭವಿಸುತ್ತಿರುವುದರಿಂದ ಶೀಘ್ರದಲ್ಲಿ ಹಾಲಿನ ದರವನ್ನು ಏರಿಕೆ ಮಾಡುವುದಾಗಿ ರೇವಣ್ಣ ಹೇಳಿಕೆ ನೀಡಿದ್ದರು. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ವಿರೋಧಿ ವ್ಯಕ್ತಪಡಿಸಿದ್ದರು. ಸರ್ಕಾರದ ವಿರೋಧದ ನಡುವೆಯೂ 12 ಹಾಲು ಒಕ್ಕೂಟಗಳ ಸಭೆ ಕರೆದು ಹಾಲಿನ ದರ ಏರಿಕೆ ಕುರಿತು ಚರ್ಚಿಸಿ ಕೊನೆಯದಾಗಿ ದರ ಏರಿಕೆಗೆ ಒಮ್ಮತದ ನಿರ್ಣಯ ಕೈಗೊಂಡಿದ್ದರು. ಪ್ರತಿಯಾಗಿ ಹಾಲಿನ ದರ ಏರಿಕೆ ಮಾಡಿದರೆ ಕೆಎಂಎಫ್ ನ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು.

ಸಹಕಾರ ಸಚಿವ ಲಕ್ಷ್ಮಣ ಸವದಿ ಕೂಡಾ ಹಾಲಿನ ದರ ಏರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಸರ್ಕಾರದ ಹೇಳಿಕೆ ಜಗ್ಗದ ರೇವಣ್ಣ ತಮ್ಮ ಹಠವನ್ನೇ ಮುಂದುವರೆಸಿ ಹಾಲಿನ ದರ ಏರಿಕೆ ಮಾಡದೇ ಗತ್ಯಂತರವಿಲ್ಲ ಎಂಬ ತಮ್ಮ ಎಂದಿನ ನಿಲುವನ್ನು ಮಾಧ್ಯಮಗಳ ಮೂಲಕ ಅನೇಕ ಬಾರಿ ತಿಳಿಸಿದ್ದರು. ಜೊತೆಗೆ ಸರ್ಕಾರಕ್ಕೆ ಸವಾಲು ಹಾಕುವ ಕುರಿತು ಮಾತನಾಡಿದ್ದರು. ಹಾಲಿನ ದರ ವಿಷಯ ಉಭಯ ನಾಯಕರ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ಹಾಲಿನ ದರ ಏರಿಕೆಗೆ ಪಟ್ಟು ಹಿಡಿದಿರುವ ಕ್ರಮದಿಂದ ಸರ್ಕಾರ ಇಂದು ಸಹಕಾರಿ ಇಲಾಖೆ 15 ಮಂದಿ ಹಿರಿಯ ಅಧಿಕಾರಿಗಳು ಇಂದು ಕೆಎಂಎಫ್ ಗೆ ಭೇಟಿ ನೀಡಿ ಲೆಕ್ಕ ಪತ್ರ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 2001 ರಿಂದ 2008ರ ವರೆಗಿನ ಅಷ್ಟೂ ದಾಖಲೆಗಳನ್ನು ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವೆಂಬರ್ 3 ರಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಒಟ್ಟಿನಲ್ಲಿ ದೇವೇಗೌಡರ ಕುಟುಂಬ ಸರ್ಕಾರದ ಮೇಲೆ ಮುಗಿಬಿದ್ದಿದೆ. ದೇವೇಗೌಡರು ಸರ್ಕಾರವನ್ನು ವಜಾಗೊಳಿಸಿ ಎಂದು ಕೇಂದ್ರಕ್ಕೆ ಆಗ್ರಹ ಮಾಡುತ್ತಾರೆ. ಕುಮಾರಸ್ವಾಮಿ ಕ್ಷುಲ್ಲಕ ವಿಚಾರ ತೆಗೆದುಕೊಂಡು ರಾಮನ ಆಣೆ ಮಾಡಿ ಎಂದು ಸವಾಲು ಎಸೆಯುತ್ತಾರೆ. ರೇವಣ್ಣ ಹಾಲಿನ ದರ ಏರಿಕೆ ಮಾಡಿಯೇ ತೀರುವೆ ಎಂದು ಸರ್ಕಾರದ ವಿರುದ್ಧ ಸೆಡ್ಡು ಹೊಡೆಯುತ್ತಾರೆ.

(ದಟ್ಸ್ ಕನ್ನಡ ವಾರ್ತೆ)

ಹಾಲಿನ ದರ ಏರಿಸಲು ಕೆಎಂಎಫ್ ನಿರ್ಧಾರ
ದರ ಏರಿಕೆ ಕೆಎಂಎಫ್ ಹಾಗೂ ಸರ್ಕಾರದ ಸಮರ
ಹಾಲಿನ ದರ ಏರಿಕೆ : ಮಹಾಮಂಡಲದ ಸಭೆ
ಹಾಲಿನ ದರ ಏರಿಕೆಗೆ ಸರ್ಕಾರ ಅಸಮ್ಮತಿ
ಹಾಲಿನ ಬೆಲೆ ಏರಿಕೆಗೆ ಸರ್ಕಾರದ ತಡೆಯಾಜ್ಞೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X