ಬೆಳಗಾವಿ: ಕೆ ಎಲ್ ಇ ಯಲ್ಲಿ ಇಂಟರ್ನೆಟ್ ತರಬೇತಿ
ಬೆಳಗಾವಿ, ನ. 6, : ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ "ಅಂತರ್ಜಾಲ ಪ್ರಪಂಚ 2007" ಕಾರ್ಯಕ್ರಮವು ನವೆಂಬರ್ 6 ರಿಂದ 8 ರವರೆಗೆ ನಗರದ ಗೋಗಟೆ ಇಂಜನಿಯರಿಂಗ್ ಕಾಲೇಜ್ ಹಾಗೂ ಕೆಎಲ್ಇ ಇಂಜನೀಯರಿಂಗ್ ಕಾಲೇಜಗಳಲ್ಲಿ ಆರಂಭವಾಗಿದೆ.
ಈ ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಬೆಳಗಾವಿ, ಬೈಲಹೊಂಗಲ, ಖಾನಾಪೂರ, ರಾಮದುರ್ಗ, ಸವದತ್ತಿ, ಗೋಕಾಕ, ಮೂಡಲಗಿ ಹಾಗೂ ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಒಟ್ಟು 2960 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ.
ಇಂಟರ್ನೆಟ್ ಬಗ್ಗೆ ಪರಿಚಯ ಹಾಗೂ ಅದರ ಬಳಕೆಯಿಂದಾಗುವ ಪ್ರಯೋಜನ ಬಗ್ಗೆ ತಿಳಿಸಿಕೊಡುವ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜೆ.ರವಿಶಂಕರ ಇಂದು ಗೋಗಟೆ ಇಂಜನಿಯರಿಂಗ್ ಕಾಲೇಜಿನಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿದರು. ಸಮಾರೋಪ ಸಮಾರಂಭ ನವೆಂಬರ್ 8 ರಂದು ಸಂಜೆ 4.30ಕ್ಕೆ ಕೆಎಲ್ಇ ಇಂಜನೀಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
