ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನ ಕಾರ್ಯದರ್ಶಿಗೆ ಉಮಾ ಕಪಾಳಮೋಕ್ಷ

By Staff
|
Google Oneindia Kannada News

ಚಿಂದ್ವಾರ, ನ. 5 : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಭಾರತೀಯ ಜನಶಕ್ತಿ ಪಕ್ಷದ ಮುಖ್ಯಸ್ಥೆ ಉಮಾಭಾರತಿ ತನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಿಲ್ ರೈ ಎಂಬುವವರಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಉಮಾ ಭಾರತಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾಗ, ಪಕ್ಷದ ಭಿನ್ನಮತೀಯ ನಾಯಕ ಪ್ರಹ್ಲಾದ್ ಪಟೇಲ್ ಅವರ ಬೆಂಬಲಿಗರಾಗಿರುವ ಅನಿಲ್ ರೈ, ಸಭೆಯಲ್ಲಿ ಬಾಗವಹಿಸಿದ್ದ ಕೆಲವು ನಾಯಕರ ಮೊಬೈಲಿಗೆ ಪದೇಪದೇ ಫೋನ್ ಮಾಡಿ ಸಭೆಯಿಂದ ಹೊರಗೆ ಬರುವಂತೆ ಆಗ್ರಹಿಸುತ್ತಿದ್ದುದೇ ಉಮಾ ಸಿಟ್ಟಿಗೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯ ನಂತರ ಅನಿಲ್ ರೈಯನ್ನು ಕಾರಿನಿಂದ ಇಳಿಯುವಂತೆ ಹೇಳಿ ಎಲ್ಲರೆದುರಿಗೆ ಎರಡು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ರೈ ಸಭೆಯ ಮರ್ಯಾದೆಯನ್ನು ಉಲ್ಲಂಘಿಸಿದ್ದರಿಂದ ಕಪಾಳಕ್ಕೆ ಹೊಡೆಯಬೇಕಾಯಿತು. ಆತ ನನ್ನ ತಮ್ಮ ಇದ್ದಂತೆ, ಆತನನ್ನ ಪ್ರೀತಿಯಿಂದ ನೋಡುವ ಮತ್ತು ಹೊಡೆಯುವ ಹಕ್ಕು ತನಗಿದೆ ಎಂದು ಉಮಾ ನಂತರ ಪತ್ರಕರ್ತರಿಗೆ ತಿಳಿಸಿದರು. ಘಟನೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ರೈ, ಉಮಾಭಾರತಿಯವರು ತನ್ನ ಹಿರಿಯ ಸಹೋದರಿಯಿದ್ದಂತೆ. ಅವರಿಗೆ ತನ್ನನ್ನು ಶಿಕ್ಷಿಸುವ ಹಕ್ಕಿದೆ ಎಂದು ತಿಳಿಸಿದರು. ಈ ಘಟನೆ ನಡೆದ ನಂತರ ಉಮಾ ಅನಿಲ್ ರೈ ಮನೆಗೆ ಹೋಗಿ ಸಾಂತ್ವನ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X