ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗುತ್ತಿಗೆಗೆ ಧಕ್ಕೆ ಇಲ್ಲ, ಚಿದು ಸ್ಪಷ್ಟನೆ

By Staff
|
Google Oneindia Kannada News

ನವದೆಹಲಿ, ನ. 5 : ಹೊರಗುತ್ತಿಗೆಯ ವಿರೋಧಿ ಎಂದೇ ಬಿಂಬಿತರಾಗಿರುವ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಭಾರತೀಯ ಹೊರಗುತ್ತಿಗೆ ಸೇವೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಕೇಂದ್ರದ ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಅನಗತ್ಯ ಗೊಂದಲ, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ನನಗೆ ಈ ಬಗ್ಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ಇನ್ನಷ್ಟು ಸುಧಾರಣೆಯಾಗಲಿವೆ ಎಂದು ಚಿದಂಬರಂ ತಿಳಿಸಿದರು.

ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ, ಭಾರತದ ನೀಡಿರುವ ಹೊರಗುತ್ತಿಗೆ ಸೇವೆಗೆ ಸಂಚಕಾರ ಬರಲಿದೆ ಎನ್ನುವ ಸುದ್ದಿ ದೇಶದ ತುಂಬೆಲ್ಲಾ ಈಗಾಗಲೇ ದಟ್ಟವಾಗಿ ಹರಡಿದೆ. ಇಂತಹ ಉಹಾಪೋಹಗಳಿಗೆ ಕಿವಿಗೊಡಬಾರದು. ಹೊರಗುತ್ತಿಗೆ ಉದ್ಯಮಕ್ಕೆ ಯಾವ ತೊಂದರೆಯಾಗದಂತೆ ಸರ್ಕಾರ ಎಚ್ಚರಿಕೆಯಿಂದ ಎದುರು ನೋಡುತ್ತಿದೆ ಎಂದು ಚಿದಂಬರಂ ಹೇಳಿದರು. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ತಮ್ಮ ಪ್ರಚಾರದಲ್ಲಿ ಹೊರಗುತ್ತಿಗೆ ನೀಡುವುದನ್ನು ಬಲವಾಗಿ ವಿರೋಧಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಭಾರತದ ಹೊರಗುತ್ತಿಗೆ ಸೇವೆಗೆ ಅಪಾಯವಿಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X