ಭಾರತದ ಹೊರಗುತ್ತಿಗೆ ಸೇವೆಗೆ ಅಪಾಯವಿಲ್ಲ

ಬೆಂಗಳೂರು, ನ. 5 : ಅತ್ತ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಆಯ್ಕೆಯಾಗಿರುವುದು ಘೋಷಣೆಯಾಗುತ್ತಿದ್ದಂತೆಯೇ ಇತ್ತ ಭಾರತದಲ್ಲಿರುವ ಹೊರಗುತ್ತಿಗೆ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ಸಣ್ಣ ನಡುಕ ಆರಂಭವಾಗಿದೆ. ಇದರ ಬೆನ್ನಲ್ಲೇ ಇನ್ ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಭಾರತದ ಹೊರಗುತ್ತಿಗೆ ಉದ್ಯಮಕ್ಕೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬರಾಕ್ ಒಬಾಮಾ ಪ್ರಚಾರ ಭಾಷಣಗಳಲ್ಲಿ, ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಕ್ಲಿಷ್ಟಕರ ಸಂದರ್ಭದಲ್ಲಿ ಸಾಫ್ಟವೇರ್ ಮತ್ತು ಬಿಪಿಒ ಕಂಪನಿಗಳು ಭಾರಿ ನಷ್ಟದಲ್ಲಿವೆ. ಇವುಗಳ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಮುಂದಿನ ಯೋಜನೆಗಳನ್ನು ಸಿದ್ಧಪಡಿಸಲಾಗುವುದು. ಮುಖ್ಯವಾಗಿ ದೇಶದಲ್ಲಿರುವ ಕಂಪನಿಗಳು ವಿದೇಶಿ ಕಂಪನಿಗಳಿಗೆ ನೀಡುತ್ತಿರುವ ಹೊರಗುತ್ತಿಗೆ ಸೇವೆಯನ್ನು ಸ್ಥಗಿತಗೊಳಿಸಿ ಅಮೆರಿಕದಲ್ಲಿಯೇ ಬಂಡವಾಳ ಹೂಡುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದು. ಹಾಗೆಯೇ ವಿದೇಶಗಳಿಗೆ ಹೊರಗುತ್ತಿಗೆ ಸೇವೆಯ ಮುಂದುವರೆಸುವ ಕಂಪನಿಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು.

ಅಮೆರಿಕದ ನೂತನ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ಭಾರತದ ವಿರೋಧಿ ಎಂದು ಎಲ್ಲೆಯೂ ಬಿಂಬಿತವಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇಲಿನಾಯ್ ಸೆನೆಟರ್ ಆಗಿದ್ದ ಒಬಾಮಾ ಮಹಾತ್ಮ ಗಾಂಧೀಜಿಯಿಂದ ಪ್ರಭಾವಿತರಾಗಿದ್ದರು ಎನ್ನುವುದು ವಿಶೇಷವಾಗಿದೆ. ಅವರ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ನೇತು ಹಾಕಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಗಾಂಧೀಜಿಯನ್ನು ಆದರ್ಶ ಪುರುಷನ ಸ್ಥಾನದಲ್ಲಿ ಕೂರಿಸಿರುವ ಒಬಾಮಾ ಭಾರತದ ಪರವಾಗಿದ್ದರೆ ಸಾಕು ಎನ್ನುವುದು ಎಲ್ಲರ ಅನಿಸಿಕೆ. ಒಬಾಮಾ ಆಯ್ಕೆಯಿಂದ ಹೊರಗುತ್ತಿಗೆ ಕ್ಷೇತ್ರಕ್ಕೆ ಯಾವುದೇ ಅಪಾಯವಿಲ್ಲ ಎಂದು ನಾಸ್ಕಾಂ ಕೂಡ ಅಭಿಪ್ರಾಯಪಟ್ಟಿದೆ.

ಕಳೆದ 33 ವರ್ಷಗಳ ಸತತ ಪ್ರಯತ್ನದ ನಂತರ ಪರಮಾಣು ರಾಷ್ಟ್ರವಾಗಿರುವ ಭಾರದ ಬಗ್ಗೆ ಸ್ಪಲ್ಪ ಆತಂಕ ತರುವ ಮಾತುಗಳನ್ನಾಡಿದ್ದಾರೆ ಒಬಾಮಾ. ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಭಾರತ ಸಿಟಿಬಿಟಿಗೆ ಸಹಿ ಹಾಕಬೇಕು ಎನ್ನುವುದು ಅವರ ಸ್ಪಷ್ಟ ನಿಲುವಾಗಿದೆ. ಇದರೊಂದಿಗೆ ಕಾಶ್ಮೀರದಲ್ಲಿ ಶಾಂತಿ ಸಂಧಾನ ಸ್ಥಾಪಿಸುವ ಬಗ್ಗೆ ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಹೇಳಿದ್ದರು.

ಭಾರತ-ಪಾಕಿಸ್ತಾನ ನಡುವೆ ಇರುವ ಕಂದಕವನ್ನು ದ್ವಿಪಕ್ಷೀಯ ಸಂಧಾನದ ಮೂಲಕವೇ ಬಗೆಹರಿಕೊಳ್ಳುತ್ತೇವೆ. ಈ ವಿಷಯದಲ್ಲಿ ಯಾರು ತಲೆ ಹಾಕುಬಾರದು ಎಂಬ ಸಿದ್ಧಾಂತವನ್ನು ಭಾರತ ಅನೇಕ ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದೆ. ಒಬಾಮಾ ಕಾಶ್ಮೀರ ಸಮಸ್ಯೆ ಕುರಿತು ಆಡಿರುವ ಮಾತುಗಳು ಕೆಲ ಸಂದೇಹಗಳನ್ನು ಹುಟ್ಟು ಹಾಕುತ್ತದೆ. ಅಲ್ಲದೇ ಇದರಲ್ಲಿ ಪಾಕಿಸ್ತಾನದ ಕೈವಾಡ ಇರುವ ಬಗ್ಗೆಯೂ ಸಂಶಯ ಮೂಡುತ್ತದೆ. ಒಟ್ಟಿನಲ್ಲಿ ಆಂಜನೇಯನ ಭಕ್ತನಾಗಿರುವ ಕಪ್ಪು ವರ್ಣಿಯ ಒಬಾಮಾ ಭಾರತಕ್ಕೆ ನೆರವಾಗಬೇಕು ಎನ್ನುವುದು ತಜ್ಞರ ಅಭಿಪ್ರಾವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಆಯ್ಕೆ
ಬ್ಯಾಂಕ್ ಠೇವಣಿಗಳ ಬಗ್ಗೆ ಆತಂಕ ಬೇಡ:ಪ್ರಧಾನಿ
ಆರ್ಥಿಕ ಬಿಕ್ಕಟ್ಟಿಗೆ ನಾರಾಯಣ ಮೂರ್ತಿ ಸಲಹೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+