ಶೂಟಿಂಗ್ ನಲ್ಲಿ ಗಗನ್ ನಾರಂಗ್ ವಿಶ್ವ ದಾಖಲೆ

gagan narangಬ್ಯಾಂಕಾಕ್, ನ. 5 : ಇತ್ತೀಚಿಗೆ ನಡೆದ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಪದಕ ಗಳಿಸಲು ವಿಫಲರಾಗಿದ್ದ ಗಗನ್ ನಾರಂಗ್ ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಸ್ಪರ್ಧೆಯ ವೈಯಕ್ತಿಕ 10 ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೊಸ ಕೀರ್ತಿ ತಂದು ಕೊಟ್ಟಿದ್ದಾರೆ. ವಿಶ್ವ ದಾಖಲೆಯ 703.5 ಅಂಕ ಗಳಿಸಿ ಈ ಪ್ರಶಸ್ತಿ ಪಡೆದು ಕೊಂಡಿದ್ದಾರೆ.

ಬೀಜಿಂಗ್ ಒಲಂಪಿಕ್ಸ್ ನಲ್ಲಿ ಪದಕ ಗಳಿಸಿದ್ದ ಚೀನಾದ ಜ್ಹುಕುವಿನ ಮತ್ತು ಫಿನ್ನ್ ಹೆಂನ್ ಹಕ್ಕಿನೇನ್ ಅವರನ್ನು ಪರಾಭವಗೊಳಿಸುವ ಮೂಲಕ ಗಗನ್ ನಾರಂಗ್ ಜಯ ದಾಖಲಿಸಿದರು. ಇದೇ ವರ್ಷದ ಆರಂಭದಲ್ಲಿ ಚೀನದಲ್ಲಿ ನಡೆದಿದ್ದ ವಿಶ್ವಕಪ್ ಕ್ರೀಡಾಕೂಟದಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗಳಿಸಿದ್ದರು. ಆದರೆ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲರಾಗಿ ಟೂರ್ನಿಯಿಂದ ಹೊರನಡೆದಿದ್ದರು

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+