ಪಂಡಿತ್ ಭೀಮಸೇನ ಜೋಶಿಗೆ ಭಾರತರತ್ನ

Bharat Ratna for Bhimsen Joshiನವದೆಹಲಿ, ನ. 5 : ಖ್ಯಾತ ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂಡಿತ ಭೀಮಸೇನ ಗುರುರಾಜ ಜೋಶಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ಮಂಗಳವಾರ ರಾತ್ರಿ ತಿಳಿಸಲಾಗಿದೆ.

ಸರ್.ಎಂ.ವಿಶ್ವೇಶ್ವರಯ್ಯ ಅವರ ನಂತರ ಈ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಕನ್ನಡಿಗರೆಂದರೆ ಭೀಮಸೇನ ಜೋಶಿ. ಏಳು ವರ್ಷದ ಧೀರ್ಘ ವಿರಾಮದ ನಂತರ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತಿರುವುದು ವಿಶೇಷವಾಗಿದೆ. ನಡೆದಾಡುವ ದೇವರೆಂದೇ ಬಿಂಬತರಾಗಿರುವ ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗ ಶ್ರೀಗಳಿಗೆ ಭಾರತರತ್ನ ನೀಡಿಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಆದರೆ, ಕೇಂದ್ರ ಸರ್ಕಾರ ಕನ್ನಡಿಗರಾದ ಭೀಮಸೇನ ಜೋಶಿ ಅವರನ್ನು ಆಯ್ಕೆ ಮಾಡಿದೆ.

ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸತ್ಯಜಿತ್ ರಾಯ್, ಎಂ.ಎಸ್.ಸುಬ್ಬುಲಕ್ಷ್ಮಿ, ಪಂಡಿತ್ ರವಿಶಂಕರ್, ಲತಾ ಮಂಗೇಶ್ಕರ್ ಹಾಗೂ ಉಸ್ತಾದ್ ಬಿಸ್ಮಿಲ್ಲಾಖಾನ್ ಅವರಿಗೆ ಈಗಾಗಲೇ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಇದೀಗ ಭೀಮಸೇನ ಜೋಶಿ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಸುಬ್ಬುಲಕ್ಷ್ಮಿ ಬಳಿಕ ಭಾರತರತ್ನ ಪುರಸ್ಕಾರ ಪಡೆಯುತ್ತಿರುವ ಎರಡನೇ ಗಾಯಕ ಎಂಬ ಕೀರ್ತಿಗೆ ಭೀಮಸೇನ ಜೋಶಿ ಭಾಜನರಾಗಿದ್ದಾರೆ.

ಜೋಶಿಯವರು 1922 ರ ಫೆಬ್ರುವರಿ ನಾಲ್ಕರಂದು ಕರ್ನಾಟಕದ ಗದಗದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲಿಯಲೆಂದು ಮನೆ ಬಿಟ್ಟು ಧಾರವಾಡದ ಕುಂದಗೋಳಕ್ಕೆ ತೆರಳಿದ ಅವರು, ಸುಪ್ರಸಿದ್ಧ ಗಾಯಕ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದೂಸ್ತಾನಿ ಸಂಗೀತದ ಕಿರಾಣಾ ಘರಾಣಾಯಲ್ಲಿ ಪರಿಣಿತಿ ಸಾಧಿಸಿದರು. 86ರ ಹರೆಯದ ಜೋಶಿ ಅವರಿಗೆ ಈಗಾಗಲೇ ಪದ್ಮವಿಭೂಷಣ(1991), ಪದ್ಮಭೂಷಣ(1985) ಮತ್ತು ಪದ್ಮಶ್ರೀ(1972) ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ನಿರಂತರ ಕಲಿಕೆಯ ಹಾದಿ:
ಫೆಬ್ರವರಿ 4, 1922 ರಲ್ಲಿ ಪಂಡಿತ ಭೀಮಸೇನ ಗುರುರಾಜ ಜೋಷಿ ಅವರು ಗದಗ ಜಿಲ್ಲೆಯ ಗದಗ ಪಟ್ಟಣದಲ್ಲಿ ಜನಿಸಿದರು.ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕಲಿಯಲೆಂದು ಮನೆಯನ್ನು ಬಿಟ್ಟ ಜೋಶಿಯವರು ನಂತರ ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯರಾದರು. ಅಬ್ದುಲ್ ಕರೀಂ ಖಾನ್ ಅವರಲ್ಲೂ ಶಿಷ್ಯ ವೃತ್ತಿಯನ್ನು ಮಾಡಿದರು.

ಹಾಡುಗಾರ್ತಿ ಬೇಗಂ ಅಕ್ತರ್ ಅವರನ್ನು ಭೇಟಿ ಮಾಡಿ, ಲಕ್ನೋ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ಕೆಲಕಾಲ ಸೇವೆ ಸಲ್ಲಿಸಿದರು.ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ 'ಕಿರಾಣಾ' ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಶಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ.

ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಇವರು ಪ್ರಸಿದ್ಧರು. ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ.

ಪ್ರತಿ ವರ್ಷವೂ ಪುಣೆಯಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಸಂಸ್ಥೆ, 12, ಅಕ್ಟೋಬರ್, 2007 ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, "ಸಂಗೀತಕಲಾನಿಧಿ"ಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದ್ದು ಅಪೂರ್ವ ಕ್ಷಣ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಲವಾರು ಗಣ್ಯರಲ್ಲಿ, ಖ್ಯಾತ ನಟ ಮತ್ತು ನಿರ್ದೇಶಕ, ಅಮೋಲ್ ಪಾಲೆಕರ್ ರೂ ಒಬ್ಬರು.

ಪ್ರಶಸ್ತಿಗಳು
*ಪದ್ಮಶ್ರೀ (1972)
*ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ(1976)
*ಪದ್ಮಭೂಷಣ (1985)
*ಪದ್ಮವಿಭೂಷಣ (1999)
*ಕರ್ನಾಟಕ ರತ್ನ(2005)

ಯಡಿಯೂರಪ್ಪ ಅಭಿನಂದನೆ
ಸಂಗೀತ ಮಾಂತ್ರಿಕ ಭೀಮಸೇನೆ ಜೋಶಿ ಅವರಿಗೆ ಭಾರತರತ್ನ ಲಭಿಸಿದ್ದಕ್ಕೆ ಅಪಾರ ಹರ್ಷ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಕ್ಕು ಇನ್ನೂ ಒಂದು ವಾರ ಕಳೆದಿಲ್ಲ. ಸಂಗೀತ ಕ್ಷೇತ್ರದಲ್ಲಿ ಗೌರಿ ಶಂಕರದಷ್ಟು ಬೆಳೆದಿರುವ ಭೀಮಸೇನ ಜೋಶಿ ಅವರಿಗೆ ಭಾರತರತ್ನ ದೊರೆತಿರುವುದು ರಾಜ್ಯ ಕ್ಕೆ ಬಂಪರ್ ಕೊಡುಗೆಯಾಗಿದೆ ಎಂದು ಬಣ್ಣಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+