ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಆಯ್ಕೆ

By Staff
|
Google Oneindia Kannada News

Barack Obama, 44th President of USವಾಷಿಂಗ್ ಟನ್, ನ. 5 : ಅಮೆರಿಕದ 44ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಅಭ್ಯರ್ಥಿ ಬರಾಕ್ ಒಬಾಮಾ ಆಯ್ಕೆಯಾಗಿದ್ದಾರೆ. ಇಂದು ನಡೆದ ಐತಿಹಾಸಿಕ ಮತದಾನದಲ್ಲಿ 338 ಅತ್ಯಧಿಕ ಮತಗಳನ್ನು ಪಡೆದು ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕೇನ್ ಅವರನ್ನು ಮಣಿಸುವುರೊಂದಿಗೆ ಆಫ್ರೀಕಾ ಮೂಲಕ ಕಪ್ಪು ವರ್ಣದ ವ್ಯಕ್ತಿಯೊಬ್ಬರು ಶ್ವೇತಭವನದ ಅಧಿಪತ್ಯವನ್ನು ಏರುವ ಮೂಲಕ ಐತಿಹಾಸಿಕ ದಾಖಲೆ ಮೆರೆದಿದ್ದಾರೆ.

47 ಹರೆಯದ ಇಲಿನಾಯ್ ಸೆನೆಟರ್ ಆಗಿದ್ದ ಬರಾಕ್ ಒಬಾಮಾ ಅವರ ಎರಡು ವರ್ಷಗಳ ಅವಿರತ ಹೋರಾಟದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅರಿಜೋವಾನ್ ಸೆನೆಟರ್ ಜಾನ್ ಮೆಕೇನ್ ಅವರು 158 ಮತಗಳನ್ನು ಗಳಿಸಿ ಸೋಲನುಭವಿಸಿದರು. ಒಬಾಮಾ ಗೆಲುವನ್ನು ಸ್ವಾಗಸಿರುವ ಮೆಕೇನ್, ಜನಾದೇಶಕ್ಕೆ ತೆಲೆಬಾಗುವುದಾಗಿ ಹೇಳಿದ್ದಾರೆ.

ಒಹಿಯೋ, ಫ್ಲೋರಿಡಾ, ವರ್ಜಿನಿಯಾ ಹಾಗೂ ಲೋವಾ ರಾಜ್ಯಗಳಲ್ಲಿ ನಡೆದ ಮತದಾನದ ಪ್ರಕ್ರಿಯೆಯನ್ನು ಶಿಕಾಗೊದಲ್ಲಿ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಫಲಿತಾಂಶವನ್ನು ಘೋಷಿಸಲಾಯಿತು. 338 ಮತಗಳನ್ನು ಒಬಾಮಾ ಪಡೆದು ಜಯಶಾಲಿಯಾದರೆ, ಜಾನ್ ಮೆಕೇನ್ ಬರೀ 156 ಮತಗಳು ಪಡೆದು ಸೋಲಿನ್ನುಂಡರು. ಕಳೆದ 10 ವರ್ಷದಗಳಿಂದ ಶ್ವೇತಭವನದ ಕನಸು ಕಾಣುತ್ತಿದ್ದ ಮೆಕೇನ್ ಆಸೆ ಭಗ್ನವಾದಂತಾಗಿದೆ.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮಾ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕ ಬೆಳವಣಿಗೆ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಮೆರಿಕ ಕಂಡ ಕನಸನ್ನು ನನಸು ಮಾಡುವ ಭರವಸೆಯನ್ನು ನೀಡಿದ ಒಬಾಮಾ, ಅಮೆರಿಕದ ಜನತೆಗೆ ಬದಲಾವಣೆ ಬೇಕಿತ್ತು. ಅದು ನನ್ನ ಮೂಲಕ ದೊರೆಕಿದೆ. ಜನರ ಅಭಿಪ್ರಾಯ ಮೇರೆಗೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

(ಏಜೆನ್ಸೀಸ್)

ಒಬಾಮಾಗೆ ಪ್ರಥಮ ಗೆಲುವಿನ ಚುಂಬನ
ಅಮೆರಿಕದ ಪೀಠಾಧಿಪತಿ ಯಾರಾಗುತ್ತಾರೆ?
ಅಮೆರಿಕಾ ಚುನಾವಣೆ ಪ್ರಚಾರಕ್ಕೆ ಅಣ್ಣಾವ್ರ ಹಾಡು
ಬರಾಕ್ ಒಬಾಮಾ ಪರ ಪ್ರಚಾರಕ್ಕೆಸಿದ್ಧವಾದ ಸಿಂಧ್ಯ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X