ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ, ಟಿಸಿಎಸ್ ಉದ್ಯೋಗಿಗಳ ಕಡಿತ ಇಲ್ಲ

By Staff
|
Google Oneindia Kannada News

ಬೆಂಗಳೂರು, ಅ. 31 : ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಅಲ್ಲೋಲ ಕಲ್ಲೋಲದಿಂದ ಸಾಫ್ಟವೇರ್ ಉದ್ಯಮ ಸಂಪೂರ್ಣವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ಬೃಹತ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡತೊಡಗಿರುವುದು ಟೆಕ್ಕಿಗಳ ನಿದ್ದೆಗೆಡಿಸಿದೆ. ಆದರೆ, ದೇಶದ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಇನ್ ಫೊಸೀಸ್ ಹಾಗೂ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿ ಸಂಖ್ಯೆಯಲ್ಲಿ ಕಡಿತವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇನ್ ಫೋಸಿಸ್ ಹಾಗೂ ಟಿಸಿಎಸ್ ಕಂಪನಿಯಲ್ಲಿ ಯಾವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಚಿಂತನೆ ಕಂಪನಿ ನಡೆಸಿಲ್ಲ. ಆರ್ಥಿಕ ಅಭದ್ರತೆಯ ನಡುವೆಯೂ ಉದ್ಯೋಗಿಗಳ ಹಿತ ಕಾಯುವುದು ಕಂಪನಿಯ ಜವಾಬ್ದಾರಿಯಾಗಿವುದರಿಂದ ಉದ್ಯೋಗಿಗಳನ್ನು ತೆಗೆದು ಹಾಕುವ ಪ್ರಶ್ನೆಯೇ ಇಲ್ಲ ಎನ್ನವ ಭರವಸೆಯನ್ನು ಕಂಪನಿಯ ಮುಖ್ಯಸ್ಥರು ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶೋಕ್ ಕುಮಾರ ಸಿ.ಮನೋಳಿ ತಿಳಿಸಿದ್ದಾರೆ.

ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಕಂಪನಿಗೆ ಬೇಕಿರುವ ಅಗತ್ಯ ಉದ್ಯೋಗಿಗಳನ್ನು ಕೆಲಸ ತೆಗೆದುಕೊಳ್ಳುವುದಾಗಿ ಕಂಪನಿ ಎಚ್ ಆರ್ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇನ್ ಫೊಸೀಸ್ ಹಾಗೂ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

ಸಾಫ್ಟ್ ವೇರ್, ಸ್ಟೀಲ್, ಸಿಮೆಂಟ್, ರಿಯಲ್ ಎಸ್ಟೇಟ್ ಸೇರಿದಂತೆ ಪ್ರಮುಖ ಉದ್ಯಮಗಳು ಭಾರಿ ನಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 10 ದಿನದಲ್ಲಿ ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಶೇ. 25 ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳ ಸಂಘ ತಿಳಿಸಿತ್ತು. ಇದರ ಬೆನ್ನಲ್ಲೇ ಇನ್ ಫೋಸಿಸ್ ಹಾಗೂ ಟಿಸಿಎಸ್ ಉದ್ಯೋಗಿಗಳ ಕಡಿತವಿಲ್ಲ ಎಂದು ಹೇಳಿರುವುದು ಸಮಾಧಾನ ತರುವ ಸಂಗತಿಯಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಅಸೋಚಮ್ ಹೇಳಿಕೆ ಬೇಜವಾಬ್ದಾರಿತನದ್ದು : ಕೇಂದ್ರ
ಭಾರತದಲ್ಲಿ ಮತ್ತಷ್ಟು ನೌಕರರಿಗೆ ಪಿಂಕ್ ಸ್ಲಿಪ್ ರೆಡಿ
ಏ ದಿಲ್ ಮಾಂಗೆ ಲೆಸ್ : ಪೆಪ್ಸಿಗೂ ಮುಟ್ಟಿದ ಬಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X