ಮೋಟಾರೋಲಾ 3,000 ಸಿಬ್ಬಂದಿಗೆ ಪಿಂಕ್ ಸ್ಲಿಪ್
ನ್ಯೂಯಾರ್ಕ್, ಅ.31: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳಿಗೂ ಸೋಕಲು ಶುರುವಾಗಿದೆ. ಅಮೆರಿಕ ಮೊಬೈಲ್ ಫೋನ್ ಮಾರುಕಟ್ಟೆಯ ಅತಿದೊಡ್ಡ ಉತ್ಪಾದನಾ ಕಂಪನಿ ಮೋಟರೋಲಾ ತನ್ನ 3,000 ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.
ಮೋಟಾರೋಲಾ ಕಂಪನಿಯ ಸೆಲ್ ಫೋನ್ ಘಟಕ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಕಂಪನಿ ಈ ನಿರ್ಧಾರಕ್ಕೆ ಬಂದಿದೆ. ಹಾಗೆಯೇ ಮೊಬೈಲ್ ಉತ್ಪಾದನಾ ಘಟಕವನ್ನು ಮುಚ್ಚಲು ನಿರ್ಧರಿಸಿದೆ. 2ನೇ ತ್ರೈಮಾಸಿಕದಲ್ಲಿ ಮೋಟಾರೋಲಾ ಕಂಪನಿ 400 ಮಿಲಿಯನ್ ಡಾಲರ್ ಗಳಷ್ಟು ನಷ್ಟ ಅನುಭವಿಸಿದೆ. ಈ ಎಲ್ಲಾ ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಸಿಬ್ಬಂದಿ ಕಡಿತಕ್ಕೆ ಮುಂದಾಗಿರುವುದಾಗಿ ಕಂಪನಿ ತಿಳಿಸಿದೆ.
ಮೊಬೈಲ್ ಫೋನ್ ಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಅಮೆರಿಕದಲ್ಲಿ ಮುಂದಿದ್ದ ಮೋಟರೋಲಾ ಕಂಪನಿಗೆ ಗೂಗಲ್ ಫೋನ್, ಆಫಲ್ ಫೋನ್ ಗಳು ಪ್ರಮುಖ ಸ್ಪರ್ಧಿಗಳಾಗಿ ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ.ಈ ಹೊಸ ಸ್ಪರ್ಧಿಗಳಿಂದ ಮೋಟಾರೋಲಾ ಕಂಪನಿಗೆ ಉತ್ಪನ್ನಗಳಿ ಭಾರಿ ಹೊಡೆತ ಬಿದ್ದು ನಷ್ಟ ಉಂಟಾಗಿತ್ತು. ಆರ್ಥಿಕ ಹೊರೆಯಿಂದ ಪಾರಾಗಲು ಶೇ.5ರಷ್ಟು ಸಿಬ್ಬಂದಿ ಗೆ ಪಿಂಕ್ ಸ್ಲಿಪ್ ನೀಡಲು ಕಂಪನಿ ನಿರ್ಧರಿಸಿದೆ.
(ಏಜೆನ್ಸೀಸ್)
ಇನ್ಫಿ, ಟಿಸಿಎಸ್ ಉದ್ಯೋಗಿಗಳಿಗೆ ನೆಮ್ಮದಿ


Click it and Unblock the Notifications
