ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌತಮ್ ಗಂಭೀರ್ ಗೆ ಒಂದು ಟೆಸ್ಟ್ ನಿಷೇಧ

By Staff
|
Google Oneindia Kannada News

ಮುಂಬೈ, ಅ. 31 : ಅಂತಾರಾಷ್ಟ್ರೀಯ ಕ್ರಿಕೆಟ್ ನ ನೀತಿ ಸಂಹಿತೆ ಉಲ್ಲಂಘನೆ ಆಪಾದನೆ ಮೇರೆಗೆ ಭಾರತೀಯ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ ಅವರನ್ನು ಒಂದು ಟೆಸ್ಟ್ ಪಂದ್ಯದಿಂದ ನಿಷೇಧ ಹೇರಲಾಗಿದೆ. ದೆಹಲಿಯ ಪಿರೋಜಾ ಷಾ ಕೋಟ್ಲಾ ಮೈದಾನದಲ್ಲಿ ನಡೆದಿರುವ ಆಸೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭರ್ಜರಿ ದ್ವಿಶತಕ ದಾಖಲಿಸಿ ಭಾರಿ ಉತ್ಸಾಹದಲ್ಲಿದ್ದ ಗಂಭೀರ ವಿರುದ್ಧ ಐಸಿಸಿ ನಿಯಮದ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗಿದೆ.

ಮೂರನೇ ಟೆಸ್ಟ್ ನ ಮೊದಲ ದಿನದಲ್ಲಿ ರನ್ ಗಳಿಸುವ ಭರದಲ್ಲಿ ಗೌತಮ್ ಗಂಭೀರ ಆಸೀಸ್ ಬೌಲರ್ ಶೇನ್ ವ್ಯಾಟ್ಸನ್ ಅವರನ್ನು ನೂಕಿರುವುದು ವಿಡಿಯೋ ಚಿತ್ರೀಕರಣದಲ್ಲಿ ಸ್ಪಷ್ಟವಾಗಿ ಮೂಡಿದೆ. ಈ ಸಂದರ್ಭದಲ್ಲಿ ಉಭಯ ಆಟಗಾರರ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆದಿತ್ತು. ಈಗಾಗಲೇ ಶೇನ್ ವ್ಯಾಟ್ಸನ್ ಗೆ ಪಂದ್ಯದ ಶೇ. 10 ರಷ್ಟು ಹಣವನ್ನು ದಂಡ ವಿಧಿಸಿದೆ.

ಇಂದು ನಡೆದ ಸಭೆಯಲ್ಲಿ ಸುಧೀರ್ಘ ಚರ್ಚೆಯ ನಂತರ ಗಂಭೀರ ಎದುರಾಳಿ ಆಟಗಾರನನ್ನು ಕೈಯಿಂದ ನೂಕಿರುವುದು ಸ್ಪಷ್ಟವಾಗಿದೆ. ಇದು ಐಸಿಸಿ ನಿಯಮ 2 ಮತ್ತು 4ರ ಸ್ಪಷ್ಟವಾದ ಉಲ್ಲಂಘನೆಯಾಗಿರುವುದು ನಿಚ್ಚಳವಾಗಿದೆ. ಆದ್ದರಿಂದ ಗೌತಮ್ ಗಂಭೀರ ಅವರನ್ನು ಮುಂದಿನ ನಡೆಯಲಿರುವ ಒಂದು ಟೆಸ್ಟ್ ನಿಂದ ನಿಷೇಧಿಸಲಾಗಿದೆ ಎಂದು ಪಂದ್ಯ ರೆಫ್ರೀ ಕ್ರಿಸ್ ಬೋರ್ಡ್ ತಿಳಿಸಿದ್ದಾರೆ.

(ದಟ್ಲ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X