ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠಿಗರ ಹಿತ ಮುಖ್ಯ ರಾಜ್ ಠಾಕ್ರೆ

By Staff
|
Google Oneindia Kannada News

ಮುಂಬೈ, ಅ. 31 : ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ಗಲಭೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮೊದಲ ಬಾರಿಗೆ ಮೌನ ಮುರಿದು ಮಾತನಾಡಿರುವ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣಿ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಮರಾಠಿಯೇತರ ಜನಗಳ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಅನೇಕ ದಿನಗಳ ನಂತರ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ನೆಲೆಸಿರುವ ವಲಸಿಗರಿಗೆ ಮತದಾನದ ಹಕ್ಕನ್ನು ನೀಡಿದರೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಛಟ್ ಪೂಜೆ ಸೇರಿದಂತೆ ಎಲ್ಲ ತರಹದ ಪೂಜಾ ಕಾರ್ಯಕ್ರಮಗಳಿಗೂ ಎಂಎನ್ಎಸ್ ಸಂಘಟನೆಯ ಬೆಂಬಲವಿದೆ. ಆದರೆ ಇದನ್ನು ಕೆಲವು ಸಮಾಜ ವಿದ್ರೋಹಿಗಳು ರಾಜಕೀಕರಣಗೊಳಿಸುತ್ತಿದ್ದಾರೆ. ಈ ಪರಿಸ್ಥಿತಿ ಮುಂದುವರೆದರೆ ಹೋರಾಟ ಹಾದಿದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಉತ್ತರ ಭಾರತೀಯರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿರುವ ಜನರಿಂದ ಮಹಾರಾಷ್ಟ್ರದಲ್ಲಿ ಇಂದು ಮರಾಠಿಗರು ಅಲ್ಪಸಂಖ್ಯಾತರಾಗಿದ್ದಾರೆ. ಮರಾಠಿಗರ ಅನ್ನಕ್ಕೆ ಬೇರೆಯವರು ಕೈಹಾಕಿರುವುದರಿಂದ ಇಂದು ಮರಾಠಿಗರ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನೆಲ್ಲಾ ಗಮನಿಸಿ ಹೋರಾಟಕ್ಕೆ ಮುಂದಾಗಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಮರಾಠಿಗರನ್ನು ಬಿಟ್ಟು ಹೊರಗಿನವರಿಗೆ ಮತದಾನದ ಹಕ್ಕನ್ನು ಯಾವ ಕಾರಣಕ್ಕೂ ನೀಡಬಾರದು. ಸರ್ಕಾರ ಈ ವಿಷಯದಲ್ಲಿ ಮುತುವರ್ಜಿ ವಹಿಸಬೇಕು. ಮರಾಠಿಗರ ಏಳಿಗೆಯನ್ನು ಗಮನದಲ್ಲಿಸಿರಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ ಠಾಕ್ರೆ ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದಾರೆ.

ಇತ್ತೀಚೆಗೆ ಮುಂಬೈಯಲ್ಲಿ ನಡೆದಿರುವ ದಾಳಿಗಳಿಗೆ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ನೇರ ಹೊಣೆಗಾರರು ಎಂದು ಗಂಭೀರ ಆರೋಪ ಮಾಡಿದ ಠಾಕ್ರೆ, ಅವರಲ್ಲಿರುವ ಬಿಹಾರಿ ಬುದ್ದಿಯಿಂದಾಗಿ ಇಂದು ಮುಂಬೈಯಲ್ಲಿ ದಂಗೆ ಸ್ಥಿತಿ ಉಂಟಾಗಿದೆ ಎಂದು ತೀಕ್ಣವಾಗಿ ಲಾಲು ವಿರುದ್ಧ ಕಿಡಿಕಾರಿದರು. ರೈಲ್ವೆ ನೇಮಕಾತಿಯಲ್ಲಿ ಬಿಹಾರಿಗಳಿಗೆ ಹೆಚ್ಚಿನ ಆಧ್ಯತೆ ಏಕೆ ಎಂದು ಪ್ರಶ್ನಿಸಿದ ರಾಜ್ ಠಾಕ್ರೆ, ದೆಹಲಿ ಯುವಕರಿಗೆ ಅನ್ಯಾಯವಾದಾಗ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಿಸಬೇಕು ಎಂದು ಸಲಹೆ ನೀಡಿದ್ದಾರೆ. ಬೆಂಗಳೂರು, ಗೋವಾದಲ್ಲೂ ಕೂಡಾ ಸ್ಥಳೀಯರಿಗೆ ಆಗುವ ಅನ್ಯಾಯವನ್ನು ಖಂಡಿಸಿ ಅನೇಕ ಪ್ರತಿಭಟನೆಗಳು ನಿತ್ಯ ನಡೆಯುತ್ತವೆ ಎಂದು ರಾಜ್ ಠಾಕ್ರೆ ತಮ್ಮ ಹೋರಾಟವನ್ನು ಬಲವಾಗಿ ಸಮರ್ಥಿಸಿಕೊಂಡರು.

ಇತ್ತೀಚೆಗೆ ಮರಾಠಿಗರ ಗುಂಪು ಉತ್ತರ ಪ್ರದೇಶದ ಕಾರ್ಮಿಕ ಬಲದೇವ ರೈ ಭೀಕರವಾಗಿ ಹತ್ಯೆ ಮಾಡಿತ್ತು. ಹಾಗೂ ಎಂಎನ್ಎಸ್ ಕ್ರಮವನ್ನು ವಿರೋಧಿಸಿ ಬಿಹಾರಿ ಮೂಲಕ ರಾಹುಲ್ ರಾಜ್ ನನ್ನು ಮುಂಬೈ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಾದ್ಯಂತ ಭಾರಿ ಹೋರಾಟ ನಡೆದಿದ್ದವು.

(ದಟ್ಸ್ ಕನ್ನಡ ವಾರ್ತೆ)

ಎಂಎನ್ಎಸ್ ಕ್ರಮ ಖಂಡಿಸಿ ಬಿಹಾರದಲ್ಲಿ ರೈಲಿಗೆ ಬೆಂಕಿ
ರಾಜ್ ಠಾಕ್ರೆ ಬಂಧನ, ಮಹಾರಾಷ್ಟ್ರ ಉದ್ವಿಗ್ನ
ಅಮಿತಾಭ್ ಕ್ಷಮೆಯಾಚನೆಯಿಂದ ಠಾಕ್ರೆ ತೃಪ್ತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X