ಸದ್ಯಕ್ಕೆ ತೈಲ ಬೆಲೆಯಲ್ಲಿ ಕಡಿತ ಇಲ್ಲ: ಕೇಂದ್ರ

ನವದೆಹಲಿ, ಅ. 30 : ತೈಲಗಳ ದರವನ್ನು ಕಡಿತಗೊಳಿಸುವ ಚಿಂತನೆ ಸರ್ಕಾರದ ಮುಂದೆ ಇಲ್ಲ. ಇನ್ನು ಕೆಲ ವಾರಗಳ ಕಾಲ ಮಾರುಕಟ್ಟೆಯ ಅವಲೋಕನದ ನಂತರ ದರ ಕಡಿತದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಂಧನ ಇಲಾಖೆಯ ಸಚಿವಾಲಯ ಸ್ಪಷ್ಟಪಡಿಸಿದೆ. ಕಳೆದ ವಾರವಷ್ಟೇ ಕೇಂದ್ರ ಇಂಧನ ಸಚಿವ ಮರಳೀಧರ್ ದೇವೋರಾ ಶೀಘ್ರದಲ್ಲಿ ತೈಲ ಬೆಲೆಗಳನ್ನು ಇಳಿಕೆ ಮಾಡಲಾಗುವುದು ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

ಕಚ್ಚಾತೈಲ ಬೆಲೆಗಳು ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿದೆ. ಪ್ರತಿ ಬ್ಯಾರಲ್ ವೊಂದಕ್ಕೆ 56.72 ಡಾಲರ್ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ದರ 60 ಡಾಲರ್ ಗಿಂತ ಕಡಿಮೆಯಾದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಸಂಸತ್ತಿನಲ್ಲಿ ಇಂಧನ ಸಚಿವ ಮುರಳೀಧರ್ ದೇವೋರಾ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಶೀಘ್ರದಲ್ಲಿ ಇಂಧನ ದರವನ್ನು ಕಡಿಮೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಇದೀಗ ಇಂಧನ ಇಲಾಖೆಯ ಸಚಿವಾಲಯ ತೈಲ ದರದಲ್ಲಿ ಕಡಿಮೆ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದೆ.

ಸಚಿವರು ಮತ್ತು ಸಚಿವಾಲಯ ಹೇಳಿಕೆ ವಿಭಿನ್ನ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದು, ತೀವ್ರ ಗೊಂದಲ ಸೃಷ್ಟಿಸಿವೆ. ಆದರೆ, ಸಚಿವಾಲಯದ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿದಾಗಿ ಇಂಧನ ಇಲಾಖೆ ಸಾಕಷ್ಟು ಹಣ ಕಳೆದುಕೊಂಡಿರುವ ಅಂಕಿ ಅಂಶಗಳು ನಮ್ಮ ಬಳಿ ಇವೆ. ಇದನ್ನು ಸರಿದೋಗಿಸುವುದರ ಜೊತೆಗೆ ಆರ್ಥಿಕ ಬಿಕ್ಕಟ್ಟಿನ ಕರಿ ನೆರಳು ತೈಲ ಉದ್ಯಮದ ಮೇಲೆ ಬಿದ್ದಿರುವುದರಿಂದ ಬ್ಯಾರಲ್ ಬೆಲೆ ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಇಂಧನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಸುಂದರೇಶನ್ ಹೇಳಿದರು.

ಇಂದು ಮತ್ತೆ ಪ್ರತಿ ಬ್ಯಾರಲ್ ಗೆ ಎರಡು ಡಾಲರ್ ಹೆಚ್ಚಾಗಿದೆ. ಇನ್ನೂ ನಾಲ್ಕು ವಾರಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪ್ರತಿ ಬ್ಯಾರಲ್ ಬೆಲೆ ತಟಸ್ಥವಾಗಿ ಉಳಿದಲ್ಲಿ ಖಂಡಿತವಾಗಿಯೂ ಇಂಧನ ದರದಲ್ಲಿ ಕಡಿತ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+