ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಅಕ್ಷಯ ಊರ್ಜಾ ದಿವಸ

By Staff
|
Google Oneindia Kannada News

ಮೈಸೂರು, ಅ. 27: ಸಾಂಪ್ರದಾಯಿಕ ಇಂಧನ ಮೂಲಗಳು ಕ್ಷಯಿಸುತ್ತಿರುವ ಇಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗಾಗಿ ಇಂಧನ ಉಳಿತಾಯ ಮಾಡಲು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ದಿವಂಗತ ರಾಜೀವ್‌ಗಾಂಧಿ ನೆನಪಲ್ಲಿ ರಾಜೀವ್‌ಗಾಂಧಿ ಅಕ್ಷಯ ಊರ್ಜ ದಿನವನ್ನು ನವೆಂಬರ್ 13ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ನಗರದ ಪುರಭವನ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ಪಿ ಮಣಿವಣ್ಣನ್ ಅವರು ತಮ್ಮ ಕಚೇರಿಯಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೇವಲ ಭಾಷಣಗಳ ಮೂಲಕ ನಾವು ಪರ್ಯಾಯ ಇಂಧನ ಮೂಲಗಳ ಬಳಕೆ ಹೆಚ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ವಸ್ತುಪ್ರದರ್ಶನ ಆವರಣ, ಅರಮನೆ ಮಂಡಳಿ ಕಚೇರಿ, ನಗರ ನ್ಯಾಯಾಲಯ ಕಟ್ಟಡಗಳು, ನಗರದಲ್ಲಿರುವ ಪರಿಶಿಷ್ಟ ಜಾತಿ ಪಂಗಡಗಳ ವಿದ್ಯಾರ್ಥಿನಿಲಯ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ವಿದ್ಯಾರ್ಥಿನಿಲಯಗಳನ್ನು ಸಂಪೂರ್ಣ ಸೌರಶಕ್ತಿಕರಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜನರಲ್ಲಿ ಅರಿವು ಮೂಡಿಸಲು ನವೆಂಬರ್ 13 ರಂದು ಪುರಭವನ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಶಾಲಾ ಕಾಲೇಜು, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್, ಇನ್ನಿತರ 3500 ಮಕ್ಕಳಿಂದ ವಿವಿಧ ಘೋಷವಾಕ್ಯಗಳ ಹೊತ್ತ ಆಕರ್ಷಕ ಮೆರವಣಿಗೆ ಜಾಥಾ ಏರ್ಪಡಿಸಲಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ "ಬದಲಿ ಇಂಧನ ಮೂಲಗಳು ಭಾರತದ ಭವಿಷ್ಯಕ್ಕೆ ಅತ್ಯಗತ್ಯ , ಸೌರಶಕ್ತಿ ನಮ್ಮ ದೇಶದ ವರದಾನ ಮತ್ತು ವಿಕೇಂದ್ರಿತ ಶಕ್ತಿ ನಿರ್ವಹಣೆ ಸಸ್ಯ ಅಭಿವೃದ್ಧಿಗೆ ಅನಿವಾರ್ಯ" ಎಂಬ ವಿಷಯಗಳ ಕುರಿತು ಚರ್ಚಾಸ್ಪರ್ಧೆ, ಭಾರತದ ಭವಿಷ್ಯ ಅಸಂಪ್ರದಾಯಕ ಶಕ್ತಿ ಮೂಲಗಳಲ್ಲಿ , ಪರಿಸರ ಸ್ನೇಹಮಯಿ ಜೀವನ ಶೈಲಿ ಮತ್ತು ಸಾಂಸ್ಕೃತಿಕ ಪರಂಪರೆ, ಭಾರತೀಯ ಸಂಸ್ಕೃತಿಯಲ್ಲಿ ಪರಿಸರ ಸ್ನೇಹಮಯ ಜೀವನ ಶೈಲಿ ಎಂಬ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಭೂಮಿಯ ಉಷ್ಣತೆ ಮತ್ತು ಜೀವನ ಶೈಲಿ ಕುರಿತು ಚಿತ್ರ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ತಾಲ್ಲೂಕು ಕೇಂದ್ರಗಳಲ್ಲಿ ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕೇಂದ್ರಸ್ಥಾನಿಕ ಸಹಾಯಕರಾದ ಪಾಲಯ್ಯ, ನವೀಕರಿಸಬಹುದಾದ ಇಂಧನ ಮೂಲಗಳ ಯೋಜನಾ ನಿರ್ದೇಶಕರಾದ ಗೋಪಾಲ್, ವಿಜ್ಞಾನಿ ಪ್ರೊ. ಜಗನ್ನಾಥ್ ಮುಂತಾದವರು ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನಕ್ಕೆ ಕ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X