ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡು ಮುಟ್ಟದ ಸೊಪ್ಪಿಲ್ಲ ಬಾಬು ಮುರಿಯದ ದಾಖಲೆಗಳಿಲ್ಲ

By Staff
|
Google Oneindia Kannada News

ಬೆಂಗಳೂರು, ಅ. 27 : 34 ವಿಶ್ವ ದಾಖಲೆಗಳನ್ನು ಬರೆದು 'ದಾಖಲೆಗಳ ಸರದಾರ' ಎನಿಸಿರುವ ಬಹುಭಾಷಾ ವಿಜ್ಞಾನಿ ಡಾ. ಎಸ್. ರಮೇಶ್ ಬಾಬು ಅವರು 'ಡಬಲ್ ಪ್ರಿಸ್ಬಿ ರ್ಯಾಲಿ'ಯಲ್ಲಿ ಗಿನ್ನೆಸ್ ದಾಖಲೆ ಸೇರಲು ಅಕ್ಟೋಬರ್ 30ರಂದು ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಶಾಲೆಯ ಸೇಂಟ್ ಥಾಮಸ್ ಸಭಾಂಗಣದಲ್ಲಿ ಪ್ರಯತ್ನ ನಡೆಸಲಿದ್ದಾರೆ.

ಇದಕ್ಕಾಗಿ 52ರ ಹರೆಯದ ರಮೇಶ್ ಬಾಬು ಅವರು 39 ವರ್ಷದ ಬಿಎನ್ ರೆಡ್ಡಿ ಅವರನ್ನು ತಮ್ಮ ಜೊತೆಗಾರರನ್ನಾಗಿ ಆಯ್ದುಕೊಂಡಿದ್ದಾರೆ. ಈ ದಾಖಲೆ ಸಾಧಿಸಲು ರಮೇಶ್ ಬಾಬು ಅವರು 40 ಅಡಿಗಳ ದೂರದಿಂದ ದಿಕ್ಕಿನಿಂದ ಬರುವ ಫ್ರಿಸ್ಬಿ, ಅಂದರೆ ತಟ್ಟೆಯಾಕಾರದ ಪ್ಲಾಸ್ಟಿಕ್ ಆಟದ ಸಾಧನವನ್ನು ಒಂದು ನಿಮಿಷದಲ್ಲಿ ಕನಿಷ್ಠ 59 ಬಾರಿ ಹಿಡಿದು ಎಸೆಯಬೇಕು. ಬರುವ ಮತ್ತು ಎಸೆಯುವ ಫ್ರಿಸ್ಬಿ ಡಿಕ್ಕಿ ಹೊಡೆಯಬಾರದು.

ಈ ಸ್ಪರ್ಧೆ ನಡೆಯುತ್ತಿರುವುದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಈಗಾಗಲೆ ನೊಂದಣಿಯಾಗಿದ್ದು ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ವಿಡಿಯೋದಲ್ಲಿ ಮುದ್ರಿತವಾಗಿ ಗಿನ್ನೆಸ್ ದಾಖಲೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಈ ಸ್ಪರ್ಧೆ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಬಾಸ್ಕೆಟ್ ಬಾಲ್ ಮಾಡಿ ಒಲಿಂಪಿಕ್ ಆಟಗಾರ ಜಿ. ದಿಲೀಪ್ ಅವರು ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಬಾಬು ಮುರಿಯದ ದಾಖಲೆಗಳಿಲ್ಲ : 'ಟಾಪ್ ಆಫ್ ದಿ ವರ್ಲ್ಡ್' ಸೆಂಟರ್ ಆಫ್ ಎಕ್ಸೆಲೆನ್ಸ್ ನಿರ್ದೇಶಕರಾಗಿರುವ ರಮೇಶ್ ಬಾಬು ಅವರು ಇಲ್ಲಿಯವರೆಗೆ ವಿವಿಧ ಕ್ಷೇತ್ರಗಳಲ್ಲಿ 34 ವಿಶ್ವ ದಾಖಲೆ, 7 ರಾಷ್ಟ್ರೀಯ ದಾಖಲೆ ಸೇರಿದಂತೆ ಒಟ್ಟು 42 ದಾಖಲೆಗಳ ಮೇಲೆ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ.ಟೇಬಲ್ ಟೆನ್ನಿಸ್, ಲಾನ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಫ್ರಿಸ್ಬಿ, ಕೇರಂ, ಪತಂಗ ಹಾರಾಟ, ಮ್ಯಾರಾಥಾನ್ ಸೈಕ್ಲಿಂಗ್, ಮ್ಯಾರಾಥಾನ್ ಹೈವೇ ಸ್ಕೂಟರ್ ಡ್ರೈವಿಂಗ್, ಮ್ಯಾರಾಥಾನ್ ವಿಜ್ಞಾನ ಉಪನ್ಯಾಸ ಮೊದಲಾದ ವಿಭಾಗಗಳಲ್ಲಿ ತಮ್ಮ ಕೈ ಮತ್ತು ಕಾಲ್ಚಳಕವನ್ನು ತೋರಿದ್ದಾರೆ. ಅತಿ ವೇಗವಾಗಿ ಸವತೆಕಾಯಿ ಕಟ್ ಮಾಡುವ, ಪೂರಿ ಮಾಡುವ, ಸಂಸ್ಕೃತ ಶ್ಲೋಕ ಪಠಿಸುವ ಸ್ಪರ್ಧೆಗಳಲ್ಲಿ ಕೂಡ ತಮ್ಮ ನೈಪುಣ್ಯತೆಯನ್ನು ಬಾಬು ಮೆರೆದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X