ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ದಿನ ಷೇರುದಾರರು ದಿವಾಳಿ!

By Staff
|
Google Oneindia Kannada News

Diwali on Deepavali : Sensex plunges below 8000ಮುಂಬೈ, ಅ. 27 : ಬೆಳಕಿನ ಹಬ್ಬ ದೀಪಾವಳಿಯಂದು ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸಾವಿರ ಪಾಯಿಂಟ್ ಕಳೆದುಕೊಂಡು ರಾಕೆಟ್ ವೇಗದಲ್ಲಿ ಪಾತಾಳಕ್ಕಿಳಿದಿದ್ದು ಹೂಡಿಕೆದಾರರ ಮೊಗವನ್ನು ಬೆಳಗುವ ಬದಲು ಕಳೆಗುಂದಿಸಿದೆ.

ಬೆಳಗಿನ ಜಾವ ತುಸು ಚೇತರಿಕೆ ಕಂಡಿದ್ದ ಸೂಚ್ಯಂಕ ಮಧ್ಯಾಹ್ನದ ಹೊತ್ತಿಗೆ ಹೂಡಿಕೆದಾರರ ಹಿಂಜರಿಕೆಯಿಂದಾಗಿ ಸಾವಿರಕ್ಕೂ ಹೆಚ್ಚು ಪಾಯಿಂಟ್ ಕಳೆದುಕೊಂಡು 7697ಕ್ಕೆ ಬಂದು ನಿಂತಿದೆ. ಸರಿಯಾಗಿ ಮೂರು ವರ್ಷಗಳ ಹಿಂದೆ ಅಕ್ಟೋಬರ್ 28 2005ರಲ್ಲಿ ಸೂಚ್ಯಂಕ ಈ ಮಟ್ಟಕ್ಕಿಳಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡ 2300 ಘಟ್ಟದಿಂದ ಕೆಳಗಿಳಿದಿದ್ದು 2252 ಅಂಕಕ್ಕೆ ಬಂದು ತಪುಪಿದೆ.

ಜಾರುಬಂಡೆಯಾಟವಾಡುತ್ತಿರುವ ಸೆನ್ಸೆಕ್ಸ್ ಅನ್ನು ಹಿಡಿತದಲ್ಲಿಡಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯಗಳು ವಿಫಲವಾಗುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆ ಹೂಡಿಕೆದಾರರು ಕಂಗಾಲಾಗಿ ಷೇರು ಮಾರಾಟಕ್ಕಿಳಿದಿದ್ದರಿಂದ ಸೆನ್ಸೆಕ್ಸ್ ಮತ್ತಷ್ಟು ಅಂಕ ಕಳೆದುಕೊಂಡಿತು. ವಿದೇಶಿ ಹೂಡಿಕೆದಾರರು ಕೂಡ ಷೇರುಪೇಟೆಯಲ್ಲಿ ಹೂಡಲು ಹಿಂಜರಿಯುತ್ತಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಕೆಲ ಕಂಪನಿಗಳ ಷೇರುಗಳು ಚೇತರಿಕೆ ಕಾಣುತ್ತಿವೆ ಎಂಬ ವರದಿ ಬಂದಿದ್ದರೂ ಕೂಡ ಷೇರುಗಳು ತಮ್ಮ ದಿಕ್ಕನ್ನು ಬದಲಿಸಲಿಲ್ಲ.

ವಿಪ್ರೋ, ಟಾಟಾ ಪವರ್, ಡಿಎಲ್ಎಫ್, ಎಸ್‌ಬಿಐ, ಎನ್‌ಟಿಪಿಸಿ, ಕೇರ್ನ್ ಇಂಡಿಯಾ, ಜೀ ಎಂಟರ್ಟೇನ್‌ಮೆಂಟ್, ಎಬಿಬಿ, ಸೀಮೆನ್ಸ್, ರಿಲಾಯನ್ಸ್ ಪವರ್, ರಿಲಾಯನ್ಸ್ ಕಮ್ಯುನಿಕೇಷನ್ಸ್, ಬಿಪಿಸಿಎಲ್ ಷೇರುಗಳ ಬೆಲೆ ಶೇ. 10ರಿಂದ 19ರಷ್ಟು ಕುಸಿದಿವೆ. ಬಿಎಸ್‌ಸಿ ಮೆಟಲ್, ಪವರ್, ಕ್ಯಾಪಿಟರ್ ಗೂಡ್ಸ್ ಷೇರುಗಳು ಶೇ.7ರಿಂದ 9ರಷ್ಟು ತಳಕ್ಕಿಳಿದಿವೆ.

ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿನ ಆರ್ಥಿಕ ಹಿನ್ನೆಡೆ ಭಾರತದ ಮೇಲೆಯೂ ವಿಪರೀತ ಪರಿಣಾಮ ಬೀರುತ್ತಿದ್ದು ಆರ್‌ಬಿಐ ಕೈಗೊಂಡ ಯಾವ ಕ್ರಮಗಳೂ ಪರಿಣಾಮ ಬೀರುತ್ತಿಲ್ಲ. ಷೇರುಗಳು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. 566 ಷೇರುಗಳು ಚೇತರಿಕೆ ಕಂಡರೆ, 2430 ಷೇರುಗಳು ಮೌಲ್ಯವನ್ನು ಕಳೆದುಕೊಂಡಿವೆ. 194 ಷೇರುಗಳ ಬೆಲೆ ನಿಂತಲ್ಲಿಯೇ ಇವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X