ಕುರುಡ-ಕುಂಟರ ಮೈತ್ರಿ: ಬಿಜೆಪಿ ಲೇವಡಿ
ಮಡಿಕೇರಿ, ಅ. 24 : ಉಪಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್ ಕ್ರಮವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಕುಂಟ ಕುರುಡರ ಮೈತ್ರಿ ಎಂದು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ನೈತಿಕತೆ ಮೇಲೆ ಮೈತ್ರಿಗೆ ಮುಂದಾಗಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಬಿಜೆಪಿಗೆ ಯಾವ ಭಯವಿಲ್ಲ ಎಂದ ಸದಾನಂದಗೌಡ, ಬಿಜೆಪಿಯು ಉಪಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸದಿಂದ ಹೇಳಿದರು.
ಇಷ್ಟು ದಿನ ಕಾಂಗ್ರೆಸ್-ಜೆಡಿಎಸ್ ಕಚ್ಚಾಟದಲ್ಲಿ ನಿರತವಾಗಿದ್ದವು. ಉಭಯ ನಾಯಕರಲ್ಲಿ ಸಾಮರಸ್ಯವಿಲ್ಲದಿರುವುದು ಜಗತ್ತಿಗೆ ತಿಳಿದ ವಿಚಾರವಾಗಿದೆ. ಬಿಜೆಪಿ ಸೋಲಿಸುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ. ಈ ಎರಡು ಪಕ್ಷ ನಾಯಕರು ಬಿಜೆಪಿ ಸೋಲಿಸುವ ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಗೆ ಜನರ ಆಶೀರ್ವಾದವಿದೆ. ನಾಲ್ಕು ತಿಂಗಳ ಆಡಳಿತ ನಡೆಸಿದ ಸರ್ಕಾರ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಈ ಎಲ್ಲ ಅಂಶಗಳನ್ನು ಜನರಿಗೆ ತಿಳಿಸುವ ಮೂಲಕ ಮತದಾರರ ಮನವೂಲಿಸುವುದಾಗಿ ಅವರು ಸದಾನಂದಗೌಡ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸಿದ್ದು ಮಾತಿಗೆ ಕಾಂಗ್ರೆಸ್ಸಿನಲ್ಲಿ ಬೆಲೆ ಇಲ್ಲ
ಕಾಂಗ್ರೆಸ್ಸಿಗೆ ಜೆಡಿಎಸ್ಸಿನ ಹಂಗು ಬೇಕಿಲ್ಲ ;ಸಿದ್ದು


Click it and Unblock the Notifications
