ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರದಿಂದ ಮಾರುದ್ದದ ವಾರಾಂತ್ಯ ರಜೆ

By Staff
|
Google Oneindia Kannada News

ಬೆಂಗಳೂರು, ಅ. 24 : ವಾರದ ರಜೆ ಮತ್ತು ಹಬ್ಬದ ರಜೆಗಳು ಕೈಕೈ ಮಿಲಾಯಿಸುವುದರಿಂದ ವರ್ಷಕ್ಕೆ ಒಂದೋ ಎರಡೋ ಸಲ ದೀರ್ಘ ವಾರಾಂತ್ಯದ ರಜೆಗಳು ಬರುವುದು ಸಾಮಾನ್ಯ. ಅತಿ ಉದ್ದದ ವಾರಾಂತ್ಯದ ರಜಾಕಾಲ ಅಪರೂಪ. ಇಂಥ ಲಾಂಗ್, ಲಾಂಗರ್, ಲಾಂಗೆಸ್ಟ್ ವಾರಾಂತ್ಯದ ರಜೆ ಈಗ ಕರ್ನಾಟಕಕ್ಕೆ ಕಾಲಿಟ್ಟಿದೆ. ಐದು ದಿನಗಳವರೆಗೆ ಸಾಗುವ ರಜೆಋತು ನಾಳೆ ಅಕ್ಟೋಬರ್ 25ರ ಶನಿವಾರದಿಂದ ಆರಂಭವಾಗುತ್ತದೆ.

ಇಲ್ಲಿ ಕೆಲವು ವ್ಯತ್ಯಾಸಗಳಿವೆ. ರಾಜ್ಯ ಸರಕಾರಿ ನೌಕರರಿಗೆ ಭಾನುವಾರ, ಸೋಮವಾರ, ಬುಧವಾರ ರಜೆ ಇದ್ದರೂ 25ರ ಶನಿವಾರ ರಜಾ ಇರುವುದಿಲ್ಲ. ವಾರಕ್ಕೆ ಐದು ದಿನಗಳ ಕೆಲಸ ಇರುವ ಕಂಪನಿಗಳಿಗೆ ಯಥಾಪ್ರಕಾರ ಶನಿವಾರ, ಭಾನುವಾರ ಮತ್ತು ಸೋಮವಾರ ನರಕ ಚತುರ್ದಶಿ ನಿಮಿತ್ತ ರಜೆ. ಕರ್ನಾಟಕದ ಬಹುತೇಕ ಐಟಿಬಿಟಿ ಕಂಪನಿಗಳಿಗೆ ಸೋಮವಾರ ರಜಾ ಘೋಷಿಸಲಾಗಿದೆ. ಮಂಗಳವಾರ ಅಮಾವಾಸ್ಯೆ. ಕೆಲಸಕ್ಕೆ ಹೋದರೆ ಹೋಗಬಹುದು ರಜಾ ಅಥವಾ ಚಕ್ಕರ್ ಹಾಕಬಹುದು.

ಅಕ್ಟೋಬರ್ 29 ರ ಬುಧವಾರ ಬಲಿಪಾಡ್ಯಮಿ, ದೊಡ್ಡ ಹಬ್ಬ. ಆವತ್ತು ರಾಜ್ಯ ಸರಕಾರಿ ಕಚೇರಿಗಳಿಗೆ ಮತ್ತೆ ರಜೆ. ಕೇಂದ್ರ ಸರಕಾರಿ ಕಚೇರಿಗಳಲ್ಲಿ ಐದು ದಿನಗಳ ವಾರ ಚಾಲ್ತಿಗೆ ಬಂದಾಗಿನಿಂದ ರಜಾದಿನಗಳ ಸಂಖ್ಯೆ ಕಡಿತವಾಗಿದೆ. ಹಾಗಾಗಿ ಪಾಪ, ಕೇಂದ್ರ ಸರಕಾರಿ ನೌಕರರಿಗೆ ಸೋಮವಾರ ಮಾತ್ರ ಚತುರ್ದಶಿ ರಜೆ. ಬುಧವಾರ ಆಫೀಸು.

ಬ್ಯಾಂಕು, ಜೀವವಿಮೆ ಕಚೇರಿಗಳಿಗೆ ಭಾನುವಾರ ಬಿಟ್ಟಂತೆ ಸೋಮವಾರ ಮತ್ತು ಬುಧವಾರ ರಜೆ ಇದೆ. ಅದು Negotiable Instruments ಪ್ರಕಾರ ನಿರ್ಧಾರವಾಗಿರುವ ರಜೆಗಳು. ಭಾರತದಲ್ಲಿ ತಲತಲಾಂತರದಿಂದ 24x7 ಕಾರ್ಯಪ್ರವೃತ್ತವಾಗುವ ಸಂಸ್ಥೆಗಳೆಂದರೆ ಭಾರತೀಯ ರೈಲ್ವೆ, ಭಾರತೀಯ ಸೇನೆ ಮತ್ತು ಭಾರತ ಸಂಚಾರ ನಿಗಮ.( BSNL) 24x7 ಸೇವೆ ಒದಗಿಸುವ ಟಿವಿ , ಅಂತರ್ ಜಾಲ ತಾಣಗಳು ಚಾಲ್ತಿಗೆ ಬಂದದ್ದು ಇತ್ತಿತ್ತಲಾಗಷ್ಟೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X