ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಪಟ್ಟಣಗಳಿಗೆ ಹೊಸ ರೂಪುರೇಷೆ

By Staff
|
Google Oneindia Kannada News

ಬೆಂಗಳೂರು, ಅ. 24: ರಾಜ್ಯದಲ್ಲಿ ನಗರಾಭಿವೃದ್ಧಿ ವೇಗವಾಗಿ ಆಗುತ್ತಿದೆ. ಈ ನಗರೀಕರಣಕ್ಕೆ ಒಂದುಸ್ಪಷ್ಟ ರೂಪ ನೀಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ನೀತಿಯನ್ನು ಸಿದ್ಧಗೊಳಿಸಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಕರಡು ನೀತಿಯನ್ನು ಸಾರ್ವಜನಿಕರ, ನಗರಾಭಿವೃದ್ಧಿ ತಜ್ಞರ, ಸ್ವಯಂಸೇವಾ ಸಂಸ್ಥೆಗಳ ಚರ್ಚೆಗೆ ಒಳಪಡಿಸಿ, ಸಲಹೆಗಳನ್ನು ಪಡೆದು ನಂತರ ಒಂದು ತಿಂಗಳೊಳಗೆ ನಗರಾಭಿವೃದ್ಧಿ ನೀತಿಯನ್ನು ಜಾರಿಗೆ ತರಲಾಗುವುದೆಂದು ನಗರಾಭಿವೃದ್ಧಿ ಸಚಿವ ಎಸ್ ಸುರೇಶ್‌ಕುಮಾರ್ ತಿಳಿಸಿದರು.

ನೂತನ ನೀತಿಯನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎ. ರವೀಂದ್ರ ಅವರು ರಚಿಸುತ್ತಿದ್ದು, ಇದುವರೆಗಿನ ಪ್ರಗತಿಯನ್ನು ಪರಿಶೀಲಿಸಲು ಯೂನಿಟಿ ಕಟ್ಟಡದಲ್ಲಿರುವ ಕೆಯುಐಡಿಎಫ್‌ಸಿ ಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಸಾರ್ವಜನಿಕರ ಚರ್ಚೆಗೆ ಒಳಪಡಿಸುವ ಮುಖ್ಯ ಉದ್ದೇಶ ಈ ನೀತಿ ಸರ್ಕಾರದ ನೀತಿಯಾಗಬಾರದು ಎಂದರು.

ಪಟ್ಟಣಗಳ ಬಗ್ಗೆ ಒಂದಿಷ್ಟು
ಕರ್ನಾಟಕ ರಾಜ್ಯದಲ್ಲಿ 24 ಮೊದಲನೆ ದರ್ಜೆ ಪಟ್ಟಣಗಳಲ್ಲಿ ಶೇ.34 ರಷ್ಟು ಜನಸಂಖ್ಯೆ ಇದ್ದರೆ ಬೇರೆ ರಾಜ್ಯಗಳಲ್ಲಿ ಶೇ 28 ರಷ್ಟಿದೆ. ಇದೇ ರೀತಿ ಪಟ್ಟಣಗಳ ಬೆಳವಣಿಗೆ ಮುಂದುವರಿದರೆ 2035 ಇಸವಿಯೊಳಗೆ ಶೇ.50ರಷ್ಟು ಜನಸಂಖ್ಯೆ ರಾಜ್ಯದ ಪಟ್ಟಣಗಳಲ್ಲಿರುತ್ತವೆ. ಹೀಗಾಗಿ ಮೊದಲು ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಬಳಿಕವೇ ಅಲ್ಲಿ ಪಟ್ಟಣಗಳ ಅಭಿವೃದ್ಧಿಹೊಂದಬೇಕು. ಬೆಂಗಳೂರಿನಲ್ಲಿ ಇದು ವ್ಯತಿರಿಕ್ತವಾಗಿದೆ. ಇದು ಬೇರೆ ಪಟ್ಟಣಗಳಲ್ಲೂ ಮರುಕಳಿಸಬಾರದು ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದು ಸಚಿವರು ತಿಳಿಸಿದರು.

ಕಳಪೆ ರಸ್ತೆಗಳ ನಿರ್ಮಾಣ ಹಾಗೂ ಇನ್ನಿತರ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಸಚಿವರಿಗೆ ದೂರು ನೀಡಬಹುದಾಗಿದೆ. ಈ ಸಂಬಂಧವಾಗಿ ಜನರಿಗೆ ಮಾಹಿತಿ ನೀಡಲು ನಗರಾಭಿವೃದ್ಧಿ ಕಚೇರಿಗಳ ಮುಂದೆ ಫಲಕಗಳನ್ನು ಅಳವಡಿಸಿ ಆ ಮೂಲಕ ಅವರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X