ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಶ್ರೇಷ್ಠ ಕಲಿ ಸಚಿನ್ ಸುಳ್ಳುಗಾರನೇ ?

By Staff
|
Google Oneindia Kannada News

ಬೆಂಗಳೂರು, ಅ. 24 : ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ, ವಿಶ್ವ ಕ್ರಿಕೆಟ್ ಗೆ ಹೊಸ ಬಾಷ್ಯವನ್ನೇ ಬರೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೇಲೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಅಡಂ ಗಿಲ್ ಕ್ರಿಸ್ಟ್ ಸಚಿನ್ ಒಬ್ಬ ಮಹಾನ್ ಸುಳ್ಳುಗಾರ ಎಂಬ ಆಪಾದನೆ ಮಾಡಿದ್ದಕ್ಕೆ ತೀವ್ರ ಟೀಕಾಪ್ರಹಾರಗಳು ಕೇಳಬರತೊಡಗಿವೆ. ಭಾರತೀಯ ಕ್ರಿಕೆಟ್ ನ ಹಿರಿಯ ಆಟಗಾರರು ಸಚಿನ್ ಮೇಲೆ ಮಾಡಿರುವ ಆರೋಪವನ್ನು ಬಲವಾಗಿ ಖಂಡಿಸಿದ್ದಾರೆ. ಆಪಾದನೆ ಮಾಡುವ ಮೊದಲು ಮಾತಿನ ಮೇಲೆ ನಿಗಾ ಎಂದು ತರಾಟೆ ತೆಗೆದುಕೊಂಡಿದ್ದಾರೆ.

20 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಯಾವತ್ತಿಗೂ ವಿವಾದಕ್ಕೆ ಒಳಗಾಗದ ಸಚಿನ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಘನತೆಗೆ ತಕ್ಕುದಲ್ಲ. ಸಚಿನ್ ಬಗ್ಗೆ ತಮ್ಮ ಆತ್ಮಚರಿತ್ರೆ ಬರೆದುಕೊಂಡಿರುವ ಆಘಾತಕಾರಿ ಅಂಶವನ್ನು ಕೂಡಲೇ ತೆಗೆದುಹಾಕದಿದ್ದರೆ ಗಿಲ್ ವಿರುದ್ಧ ಐಸಿಸಿ ದೂರು ನೀಡಲಾಗುವುದು ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ಆದರ್ಶ ವ್ಯಕ್ತಿತ್ವವುಳ್ಳರಾಗಿದ್ದಾರೆ ಎಂದು ಕ್ರೀಡಾಭಿಮಾನಿಗಳ ಅನಿಸಿಕೆಯಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ನಡುವೆ ಕಿರಿಕ್ ಗಳಾಗುವುದು ಹೊಸದೇನಲ್ಲ. ಹರ್ಭಜನ್ ಸಿಂಗ್, ಸೈಮಂಡ್ಸ್ ಜಗಳ ಸೇರಿ ಅನೇಕ ವಿವಾದಗಳು ಉಭಯ ದೇಶಗಳ ನಡುವೆ ತುಸು ವೈಷಮ್ಯ ಹೆಚ್ಚಿಸಿವೆ ಎಂದೇ ಹೇಳಬಹುದು. ಇನ್ನೊಬ್ಬರ ಏಳಿಗೆಯನ್ನು ಅರಗಿಸಿಕೊಳ್ಳುವುದು ಆಸೀಸ್ ಗಳಿಗೆ ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಮೊಹಾಲಿಯಲ್ಲಿ ನಡೆದ ಟೆಸ್ಟ್ ನಲ್ಲಿ ಸಚಿನ್ ಟೆಸ್ಟ್ ಕ್ರೀಡಾ ಇತಿಹಾಸದಲ್ಲಿ ಹೆಚ್ಚು ಗಳಿಸಿ ವಿಶ್ವ ಏಕೈಕ ಆಟಗಾರನೆಂಬ ಗೌರವವಕ್ಕ ಪಾತ್ರರಾಗಿದ್ದಾರೆ. ಕಾಲೆಳೆಯುವುದೇ ಕಾಯಕವಾಗಿರಿಸಿಕೊಂಡಿರುವ ಕಾಂಗರೂ ಆಟಗಾರರು ಪರದೇಶದ ಆಟಗಾರರನ್ನು ಗೌರವದಿಂದ ಕಾಣುವುದನ್ನು ಕಲಿಯಬೇಕಿದೆ.

ಕಾಂಗರೂ ಆಟಗಾರ ಅಡಂ ಗಿಲ್ ಕ್ರಿಸ್ಟ್ ಅವರ ಆತ್ಮಚರಿತ್ರೆ'ಟ್ರೂಕಲರ್ಸ್'ನಲ್ಲಿ ಸಚಿನ್ ಒಬ್ಬ ಮಹಾನ್ ಸುಳ್ಳುಗಾರ ಎಂದು ಬರೆದಿರುವುದು ಸರಿಯೇ. ಭಾರತದ ಜಾಗತಿಕ ಮಟ್ಟದ ಕ್ರಿಕೆಟ್ ಕಲಿಗೆ ಇಂಥ ಆಪಾದನೆ ಸರಿಯೇ. ಈ ಕುರಿತು ನಿಮ್ಮ ಅನಿಸಿಕೆ ದಾಖಲಿಸಿ.

(ದಟ್ಸ್ ಕನ್ನಡ ವಾರ್ತೆ)

ಸಚಿನ್ ಪ್ರಾಮಾಣಿಕತೆಯ ಪ್ರಶ್ನಿಸಿದ ಗಿಲ್ ಕ್ರಿಸ್ಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X