ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಉದ್ಯೋಗಿ ಅಪಹರಣ, ಬಿಡುಗಡೆ

By Staff
|
Google Oneindia Kannada News

vijayalakshmiಬೆಂಗಳೂರು, ಅ. 21 : ವಿಪ್ರೋ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರೊಬ್ಬರನ್ನು ಅಪಹರಣ ಮಾಡಿ, ಒತ್ತೆಹಣಕ್ಕಾಗಿ ಪೀಡಿಸುತ್ತಿದ್ದ ಮೂರು ಮಂದಿ ಕ್ಯಾಬ್ ಚಾಲಕರನ್ನು ಮಿಂಚಿನ ಕಾರ್ಯಚರಣೆಯೊಂದರಲ್ಲಿ ತಿಲಕನಗರದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಶಿವಾಜಿ ನಗರದ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಆಗಂತುಕರು ಅಪಹರಣ ಮಾಡಿರುವ ಘಟನೆ ಸೋಮವಾರ ಮಧ್ಯರಾತ್ರಿ ಜರುಗಿದೆ.

ವಿಜಯಲಕ್ಷ್ಮಿ ವಿಪ್ರೋ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಫ್ಟವೇರ್ ಇಂಜನಿಯರ್. ಸೋಮವಾರ ಕೆಲಸ ಮುಗಿಸಿ ಮನೆಗ ತೆರಳುವ ಸಂದರ್ಭದಲ್ಲಿ ವಿಪ್ರೋ ಕಂಪನಿಯ ಕ್ಯಾಬ್ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ವಿಜಯಲಕ್ಷ್ಮಿ ಅವರನ್ನು ಅಪಹರಿಸಿ ಬೊಮ್ಮನಹಳ್ಳಿಯ ಮನೆಯೊಂದರಲ್ಲಿ ಕೂಡಿಹಾಕಿದ್ದರು. ವಿಜಯಲಕ್ಷ್ಮಿ ಅವರನ್ನು ಕೂಡಿ ಹಾಕಿ ಮನೆಗೆ ತೆರಳಿದ ಕ್ಯಾಬ್ ನ ಚಾಲಕ ನೇರವಾಗಿ ವಿಜಯಲಕ್ಷ್ಮಿ ಅವರ ಮನೆಗೆ ಬಂದು "ನಿಮ್ಮ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ನನ್ನನ್ನು ಕೂಡಾ ಅಪಹರಿಸಿದ್ದರು. ಆದರೆ ನಾನು ತಪ್ಪಿಸಿಕೊಂಡು ಬಂದಿರುವುದಾಗಿ ಆಕೆಯ ತಂದೆ-ತಾಯಿ ಎದುರಿಗೆ ಹೇಳಿದ್ದಾನೆ. ಅಲ್ಲದೇ ಅಪಹರಣಕಾರರು 1.5 ಕೋಟಿ ಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ" ಎಂದು ಆಕೆಯ ಪೋಷಕರಿಗೆ ಕ್ಯಾಬ್ ಚಾಲಕ ತಿಳಿಸಿದ್ದಾನೆ. ತಕ್ಷಣ ಗಾಬರಿಯಾದ ವಿಜಯಲಕ್ಷ್ಮಿ ಪೋಷಕರು ತಿಲಕನಗರ ಪೊಲೀಸ್ ಠಾಣೆಗೆ ದೌಡಾಯಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ತನಿಖೆ ಆರಂಭಿಸಿದ ತಿಲಕನಗರ ಪೊಲೀಸರು ಕ್ಯಾಬ್ ಚಾಲಕನ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದ ನಂತರ ಇಬ್ಬರ ಸ್ನೇಹಿತರೊಂದಿಗೆ ಹಣದ ಆಸೆಗಾಗಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಜಯಲಕ್ಷ್ಮಿ ಅವರನ್ನು ಇಂದು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣ ಸುಖಾಂತ್ಯಗೊಂಡಂತಾಗಿದೆ.

ವಿವಾಹಿತ ಮಹಿಳೆ ಅಪರಹಣ

ನಗರದ ಶಿವಾಜಿನಗರದ ಬಳಿ ಇರುವ ಮಾರುತಿ ಸೇವಾನಗರದ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ತಂಡ ವಿವಾಹಿತ ಮಹಿಳೆಯೊಬ್ಬರನ್ನು ಅಪಹರಿಸಿದ್ದಾರೆ. ಶಿವಾಜಿನಗರದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮೇರಿ ಅಪಹರಣಕ್ಕೊಳಗಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಕು ತೋರಿಸಿದ ದುಷ್ಕರ್ಮಿಗಳು ಮಹಿಳೆಯನ್ನು ಅಟೋದಲ್ಲಿ ಕುಳ್ಳಿರಿಸಿಕೊಂಡು ಪರಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಹರಣಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)
ಟೆಕ್ಕಿಗಳಿಗೆ ಬೇಕು ಇನ್ ಹೌಸ್ ಕೌನ್ಸ್ ಲಿಂಗ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X