ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿಗೆ ನೂತನ ಲೈಸನ್ಸ್ ಪದ್ದತಿ: ಕಟ್ಟಾ

By Staff
|
Google Oneindia Kannada News

ಬೆಂಗಳೂರು, ಅ. 21 : ಮುಂದಿನ ವರ್ಷದಿಂದ ಅಬಕಾರಿ ಇಲಾಖೆಗೆ ನೂತನ ಲೈಸನ್ಸ್ ಪದ್ಧತಿಯನ್ನ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅಬಕಾರಿ ಹಾಗೂ ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಕುರಿತು 15 ದಿನಗಳಲ್ಲಿ ಕರಡು ಪ್ರತಿಯನ್ನು ಮಂಡಿಸಲಾಗುವುದು ಎಂದರು. ಅಗ್ಗದ ದರದಲ್ಲಿ ಮದ್ಯ ತಯಾರಿಸುವ ಮೂಲಕ ಸರ್ಕಾರಿ ಹೆಚ್ಚಿನ ಆದಾಯ ನಿರೀಕ್ಷೆಯಿಂದ ಇಲಾಖೆಯಲ್ಲಿ ಅನೇಕ ನೂತನ ಯೋಜನೆಗಳನ್ನು ಜಾರಿತರಲು ಚಿಂತನೆ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮಂಗಳೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿಗಳಲ್ಲಿ ಐಟಿ ಪಾರ್ಕ್ ಗಳನ್ನು ನಿರ್ಮಿಸಲಾಗುವುದು. ಜೊತೆಗೆ ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಐಟಿ ಮೇಳವನ್ನುಎಂದಿನಂತೆ ನಡೆಸಲಾಗುವುದು ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ದ್ರಾಕ್ಷಿ ಬೆಳೆಗಾರರಿಗೆ ಪೂರಕವಾದ ವೈನ್ ನೀತಿ
ಆಲ್ಕೋಹಾಲ್ ರಹಿತ ವೈನ್ ಕುಡಿರಿ, ರೈತರ ಕಾಪಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X