ವಿವಾದಾತ್ಮಕ ಸ್ಪೀಡ್ ಗವರ್ನರ್ ಆದೇಶ ರದ್ದು
ಬೆಂಗಳೂರು, ಅ.21: ವಾಣಿಜ್ಯ ಸರಕು ಸಾಗಾಣೆ ವಾಹನಗಳಿಗೆ ವಿವಾದಾತ್ಮಕ ಸ್ಪೀಡ್ ಗವರ್ನರ್ ಅಳವಡಿಕೆ ನಿರ್ಧಾರವನ್ನ್ನು ರಾಜ್ಯ ಸರ್ಕಾರ ಕೊನೆಗೂ ವಾಪಸ್ ಪಡೆದಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಅಧಿಕೃತ ಮುದ್ರೆ ಬೀಳಲಿದೆ.
ಸ್ಪೀಡ್ ಗವರ್ನರ್ ಆದೇಶ ವಾಪಸ್ ಪಡೆಯಲು ಲಾರಿ ಮಾಲೀಕರ ಸಂಘ ಸರ್ಕಾರಕ್ಕೆ ಅ.30ರವರೆಗೆ ಗಡುವು ನೀಡಿತ್ತು. ಸರಕು ಸಾಗಣೆ ವಾಹನಗಳ ಮುಷ್ಕರದಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟ, ಸಾರ್ವಜನಿಕರಿಗೆ ಆಗುವ ತೊಂದರೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದರು.
ವೇಗ ನಿಯಂತ್ರಣ ಅಳವಡಿಸದ ವಾಹನಗಳನ್ನು ತಡೆಯುವುದು, ದಂಡ ವಿಧಿಸುವುದು ಹಾಗೂ ತಡೆಹಿಡಿದ ವಾಹನಗಳನ್ನು ಒಂದೆಡೆ ನಿಲ್ಲಿಸುವುದು ಕಷ್ಟದ ಕೆಲಸ. ಅದಕ್ಕೆ ಜಾಗ ಮತ್ತು ಪೊಲೀಸ್ ಸಿಬ್ಬಂದಿ ಬೇಕಾಗುತ್ತದೆ. ಈ ಕಾರಣಕ್ಕೆ ಸರ್ಕಾರ ಮರುಚಿಂತನೆ ನಡೆಸಿ ಆದೇಶ ವಾಪಸ್ ಪಡೆಯಲು ತೀರ್ಮಾನಿಸಿದೆ ಎಂದು ಸಚಿವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ವೇಗ ನಿಯಂತ್ರಕ ತಿಕ್ಕಾಟ: ಟ್ರಕ್ ಗಳ ಮುಷ್ಕರ
ವೇಗ ನಿಯಂತ್ರಕ ಕಾನೂನು ಅವೈಜ್ಞಾನಿಕ : ಅಶೋಕ್
ವೇಗ ನಿಯಂತ್ರಕ ಕಡ್ಡಾಯ: ರಾಜ್ಯ ಹೈಕೋರ್ಟ್ ಆದೇಶ


Click it and Unblock the Notifications
