ಚರ್ಚ್ ದಾಳಿ ಸೇರಿ 3 ಪ್ರಕರಣಗಳು ಸಿಓಡಿಗೆ
ಮಂಗಳೂರು, ಅ. 21 : ಕಳೆದ ಕೆಲ ತಿಂಗಳ ಹಿಂದೆ ನಡೆದ ಹೆಬ್ರಿ ಶೂಟೌಟ್ ಪ್ರಕರಣ, ಬೆಂಗಳೂರಿನ ಬಳಿಯ ಯಡವನಹಳ್ಳಿ ಚರ್ಚ್ ದಾಳಿ ಹಾಗೂ ತರಬೇತಿ ಪಡೆಯುತ್ತಿರುವ ಶೂಟೌಟ್ ಗೆ ರೈತನೊಬ್ಬ ಬಲಿಯಾದ ಪ್ರಕರಣಗಳನ್ನು ಸಿಓಡಿ ತನಿಖೆಗೆ ಗೃಹ ಸಚಿವ ವಿ.ಎಸ್.ಆಚಾರ್ಯ ಆದೇಶಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಾರ್ಕಳದಲ್ಲಿ ಬಿಜೆಪಿಯ ಕಾರ್ಯಕರ್ತರಾಗಿದ್ದ ಸಾಗರ್ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಅವರನ್ನು ಅನಾಮಧೇಯ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಆದರೆ ತನಿಖೆ ನಿಧಾನವಾಗುತ್ತಿದೆ ಎನ್ನುವ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಸತ್ಯಾಸತ್ಯತೆಯನ್ನು ಅರಿಯಲು ಸಿಓಡಿ ವಹಿಸಲಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ಸರ್ಕಾರವನ್ನೇ ಪದಚ್ಯುತಿಗೊಳಿಸುವ ಮಟ್ಟಕ್ಕೆ ತಂದು ನಿಲ್ಲಿಸಿದ್ದ ಚರ್ಚ್ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಿತ್ತು. ಚರ್ಚ್ ದಾಳಿ ಪ್ರಕರಣ ರಾಷ್ಟ್ರೀಯ ಸುದ್ದಿಯಾಗಿಯೂ ಮಾರ್ಪಡಾಗಿತ್ತು. ದಾಳಿಯನ್ನು ಖಂಡಿಸಿದ್ದ ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡು ಬಾರಿ ನೋಟಿಸ್ ನೀಡಿತ್ತು. ಸಂವಿಧಾನದ ಸೆಕ್ಷನ್ 356 ನಿಯಮವನ್ನು ಏಕೆ ಜಾರಿಗೊಳಿಸಬಾರದು ಎಂದು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗೂಂಡಾ ಕಾಯ್ದೆಯನ್ನು ಸಹ ಜಾರಿಗೆ ತಂದಿತ್ತು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನ ಯಡವನಹಳ್ಳಿಯ ಚರ್ಚ್ ಮೇಲೆ ದಾಳಿ ನಡೆಯಿತು. ಚರ್ಚ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಚರ್ಚ್ ನಲ್ಲಿರುವ ವಸ್ತುಗಳ ಸುಟ್ಟು ಹೋಗಿವೆ ಎಂದು ತನಿಖೆಯಿಂದ ತಿಳಿದು ಬಂದಿತು. ಆದರೂ ಆದು ಅನೇಕ ಸಂದೇಹ ಸೃಷ್ಟಿಸಿದ್ದರಿಂದ ಈ ಪ್ರಕರಣವನ್ನೂ ಸಿಓಡಿ ನೀಡಲಾಗಿದೆ ಎಂದು ಆಚಾರ್ಯ ಹೇಳಿದರು.
ಬೆಂಗಳೂರಿನ ಹೊರವಲಯದ ಪೊಲೀಸ್ ತರಬೇತಿ ಪಡೆಯುತ್ತಿರುವ ಟ್ರೇನಿ ಪೊಲೀಸರು ಹಾರಿಸಿದ ಗುಂಡಿಗೆ ರೈತನೊಬ್ಬ ಬಲಿಯಾಗಿದ್ದ. ಇದು ಭಾರಿ ಸಂಶಯಕ್ಕೆ ಕಾರಣವಾಗಿತ್ತು. ಇದನ್ನು ಕೂಡಾ ಸಿಓಡಿ ತನಿಖೆ ವಹಿಸಲಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ವಿವರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಭಜರಂಗಿ ಮಹೇಂದ್ರ ಮೇಲೆ ಗೂಂಡಾ ಕಾಯ್ದೆ ಅಸ್ತ್ರ
ಮಂಗಳೂರು ಗಲಭೆ : ಸಿಓಡಿ ತನಿಖೆಗೆ ಅಸ್ತು


Click it and Unblock the Notifications
