ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ರೋಗವಲ್ಲ: ದೆಹಲಿ ಹೈಕೋರ್ಟ್

By Staff
|
Google Oneindia Kannada News

Homosexuality not a disease: Delhi High Courtನವದೆಹಲಿ, ಅ.21: "ಸಲಿಂಗಕಾಮ ರೋಗವಲ್ಲ. ಅದು ಒಂದು ಬಗೆಯ ವಿಚಿತ್ರ ನಡವಳಿಕೆ ಎನ್ನಬಹುದು. ಕಾನೂನಿನ ಪರಿಧಿಯಲ್ಲಿ ಅದನ್ನು ಸಿಕ್ಕಿಸಿ, ಕಾನೂನುಬದ್ಧಗೊಳಿಸಿದರೆ ಅನಾಹುತ ಉಂಟಾಗುತ್ತದೆಎನ್ನಲು ಬರುವುದಿಲ್ಲ" ಎಂದು ಸ್ಥಳೀಯ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಸಲಿಂಗಕಾಮವನ್ನು ದೊಡ್ಡ ರೋಗವೆಂದು, ದೇಶದಲ್ಲಿ ಹೆಚ್ ಐವಿ ಸೋಂಕು ಹರಡಲು ಅದೇ ಕಾರಣ ಎಂದು ಕೇಂದ್ರ ಸರ್ಕಾರದ ಪರವಾಗಿ ನ್ಯಾಯವಾದಿ ಪಿ ಪಿ ಮಲ್ಹೋತ್ರ ವಾದ ಮಂಡಿಸಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ನ್ಯಾಯ ಪೀಠ, ಇದಕ್ಕೆ ಸೂಕ್ತವಾದ ಆಧಾರಗಳಿಲ್ಲ. ಸಲಿಂಗಕಾಮವನ್ನು ರೋಗವೆಂದು ಸಾಬೀತುಪಡಿಸಲು ಸಾಕಷ್ಟು ನಿದರ್ಶನಗಳಿಲ್ಲ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ(WHO) ವರದಿಯಲ್ಲಿ ಸಲಿಂಗಕಾಮ ರೋಗವಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ನ್ಯಾಯಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಶೇಕಡಾವಾರು ಸಂಖ್ಯೆಯಲ್ಲಿ ಸಲಿಂಗಕಾಮಿಗಳು ಕಡಿಮೆ ಪ್ರಮಾಣದಲ್ಲಿದ್ದರೂ, ಸಮಾಜದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ದುಶ್ಚಟವಾಗಿದೆ. ಈ ಬಗ್ಗೆ ಕಾನೂನು ಜಾರಿಗಳಿಸದಿದ್ದರೆ, ಕೋರ್ಟ್ ಕೂಡ ಸಮ್ಮತಿಸಿದೆ ಎಂದು ನಿರ್ಭಿಡೆಯಾಗಿ ಕಾಮ ವ್ಯವಹಾರದಲ್ಲಿ ತೊಡಗುತ್ತಾರೆ. ಇದರಿಂದ ಏಡ್ಸ್ ಹಬ್ಬಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಮಲ್ಹೋತ್ರಾ ವಾದಿಸಿದರು. ಆದರೆ, ಹೈಕೋರ್ಟ್ ಏಡ್ಸ್ ಮಾರಿಗೆ ತಳ್ಳಲು ಇದು ಒಂದು ವಾಹಕವಾಗಿದೆ ಆದರೆ, ಇದನ್ನೆ ಮಾರಿ ಎನ್ನುವಂತಿಲ್ಲ. ಆದ್ದರಿಂದ ಕಾನೂನು ಕ್ರಮ ಜಾರಿಗೊಳಿಸಲು ಸದ್ಯಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X