ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಬ್ಬಂದಿ ವೇತನಕ್ಕೆ ಕತ್ತರಿ?

By Staff
|
Google Oneindia Kannada News

tcs ceo ramaduraiಕೋಲ್ಕತ್ತಾ, ಅ.14: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ತನ್ನ ಸಿಬ್ಬಂದಿಯ ಮಾರ್ಪಾಟಿಗೊಳಗಾಗುವ ವೇತನವನ್ನು(ವೇರಿಯಬಲ್ ಪೇ) ಕಡಿತಗೊಳಿಸಲು ನಿರ್ಧರಿಸಿದೆಯೆ?

ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ 2008-09ನೇ ಸಾಲಿನ ತ್ರೈಮಾಸಿಕ ಅವಧಿಯಲ್ಲಿ ಟಿಸಿಎಸ್ ತನ್ನ ಸಿಬ್ಬಂದಿಯ ವೇರಿಯಬಲ್ ಪೇಯನ್ನು ಕಡಿತ ಮಾಡಲು ನಿರ್ಧರಿಸಿದೆ. ಈ ಹಿಂದೆ ಕಂಪನಿ ತನ್ನ ಸಿಬ್ಬಂದಿ ವೇತನವನ್ನು ಕಡಿತಗೊಳಿಸುತ್ತದೆ ಎಂಬ ಆತಂಕದ ಸುದ್ದಿ ದಟ್ಟವಾಗಿ ಹಬ್ಬ್ಬಿತ್ತು. ಈಗ ಆ ಆತಂಕ ನಿಜವಾಗಿದ್ದು ಸುಮಾರು 70 ಸಾವಿರ ಸಿಬ್ಬಂದಿಯ ವೇತನ ಕಡಿತಕ್ಕೊಳಗಾಗಲಿದೆ.

ಎರಡನೆ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ನಂತರವಷ್ಟೆ ಈ ಕುರಿತು ಸ್ಪಷ್ಟ ಉತ್ತರ ಸಿಗಲಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ. ಟಿಸಿಎಸ್ ಕಂಪನಿಯಲ್ಲಿ ವೇರಿಯಬಲ್ ಪೇಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಒಂದು ಭಾಗ ನಿಶ್ಚಿತ ವೇತನ ಹಾಗೂ ಮತ್ತೊಂದು ಭಾಗ ಮಾರ್ಪಾಟಿಗೊಳಗಾಗುವ ವೇತನ. ಉದಾಹರಣೆಗೆ ವೇರಿಯಬಲ್ ಪೇ ರು.1000 ಎಂದಾದರೆ ನಿಶ್ಚಿತ ವೇತನ ರು.700 ಹಾಗೂ ಮಾರ್ಪಾಡಿಗೊಳಗಾಗುವ ವೇತನ ರು.300ರಷ್ಟಿರುತ್ತದೆ. ನಿಶ್ಚಿತ ವೇತನವನ್ನು ಯಾವುದೇ ಪರಿಸ್ಥಿತಿಯಲ್ಲೂ ಕಡಿತಗೊಳಿಸುವುದಿಲ್ಲ.

(ಏಜೆನ್ಸೀಸ್)
ಡಾಲರ್ ಎದಿರು ದಾಖಲೆ ಕುಸಿತ ಕಂಡ ರುಪಾಯಿ
2 ನೇ ತ್ರೈಮಾಸಿಕ ವರದಿ : ಸುಸ್ಥಿತಿಯಲ್ಲಿ ಇನ್ಫಿ
ಆರ್ಥಿಕ ಬಿಕ್ಕಟ್ಟಿಗೆ ನಾರಾಯಣ ಮೂರ್ತಿ ಸಲಹೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X