ದಾಸ್ ಮುನ್ಷಿ ಪರಿಸ್ಥಿತಿ ಗಂಭೀರ, ಏಮ್ಸ್ ಗೆ ದಾಖಲು

ನವದೆಹಲಿ, ಅ.13:ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಸೋಮವಾರ ಮುಂಜಾನೆ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ 2.30ರ ಸಮಯದಲ್ಲಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಕಾರನ ಏಮ್ಸ್ ನ ಹೃದ್ರೋಗ ಚಿಕಿತ್ಸಾ ಘಟಕಕ್ಕೆ ದಾಸ್ ಮುನ್ಷಿಯನ್ನು ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ಸಮಯಕ್ಕೆ ಅವರ ಎಡ ಹೃತ್ಕುಕ್ಷಿ ಸಂಪೂರ್ಣವಾಗಿ ವಿಫಲಾಗಿತ್ತು ಎಂದು ಏಮ್ಸ್ ನ ವಕ್ತಾರ ವೈ.ಕೆ.ಗುಪ್ತ ತಿಳಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+